ಮನೋರಂಜನೆ

ಕಾವೇರಿ ಪ್ರತಿಭಟನೆ ನಡುವೆ ಐಪಿಎಲ್ ಆಯೋಜನೆಗೆ ಆಕ್ರೋಶ; ತಮಿಳುನಾಡಿನ ಒಗ್ಗಟ್ಟಿಗಾಗಿ ಚೆನ್ನೈ ತಂಡ ಕಪ್ಪು ಪಟ್ಟಿ ಧರಿಸಲಿ: ರಜನಿಕಾಂತ್ ಒತ್ತಾಯ

Pinterest LinkedIn Tumblr

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿರುವಾಗ ಐಪಿಎಲ್ ಪಂದ್ಯ ಆಯೋಜನೆ ಮಾಡಿರುವುದು ಮುಜುಗರದ ಸಂಗತಿಯಾಗಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಚನ್ನೈ ಸೂಪರ್ ಕಿಂಗ್ಸ್ ತಂಡವಾದರೂ ಕಪ್ಪು ಪಟ್ಟಿ ಧರಿಸುವ ಮೂಲಕ ಕಾವೇರಿ ಬಗ್ಗೆ ಒಗಟ್ಟು ಪ್ರದರ್ಶಿಸುವಂತೆ ತಿಳಿಸಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜನೆಗೆ ಇದು ಸೂಕ್ತ ಸಮಯವಲ್ಲಾ ಎಂದು ಅವರು ಹೇಳಿದ್ದಾರೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಸಿನಿಮಾ ಕಲಾವಿದರು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಪ್ರಧಾನಿ ನರೇಂದ್ರಮೋದಿ ಕೂಡಲೇ ರಚಿಸಬೇಕೆಂದು ರಜನಿಕಾಂತ್ ಆಗ್ರಹಿಸಿದ್ದು, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ತಮಿಳುನಾಡಿನ ಜನರ ಧ್ವನಿ ಒಂದೇ ಆಗಿರಬೇಕಾಗಿದೆ ಎಂದು ಕರೆ ನೀಡಿದ್ದಾರೆ.

ಒಂದು ವೇಳೆ ಕೇಂದ್ರಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದಿದ್ದರೆ ತಮಿಳುನಾಡಿನ ಎಲ್ಲಾ ಕುಟುಂಬಗಳ ನೋವಿಗೆ ಬೆಲೆ ತೆರಬೇಕಾಗುತ್ತದೆ ಎಂದು ರಜನಿಕಾಂತ್ ಎಚ್ಚರಿಕೆ ನೀಡಿದ್ದಾರೆ.

Comments are closed.