ರಾಷ್ಟ್ರೀಯ

ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆಗಾಗಿ ಆಗ್ರಹಿಸಿ ತಮಿಳು ಚಿತ್ರೋದ್ಯಮದಿಂದ ಉಪವಾಸ ಸತ್ಯಾಗ್ರಹ

Pinterest LinkedIn Tumblr

ಚೆನ್ನೈ : ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗಾಗಿ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ವಿವಿಧ ರಾಜಕೀಯ ಪಕ್ಷಗಳ ನಂತರ ಕಾಲಿವುಡ್ ಕೂಡಾ ಪ್ರತಿಭಟನೆಯ ಅಖಾಡಕ್ಕೆ ಧುಮುಕ್ಕಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಕಾಲಿವುಡ್ ಚಿತ್ರೋದ್ಯಮದಿಂದ ಚೆನ್ನೈನ ವಾಲುವಾರ್ ಕೊಟ್ಟಮ್ ಬಳಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.

ನಟ , ರಾಜಕಾರಣಿಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರೊಂದಿಗೆ ತಮಿಳು ನಟರಾದ ವಿಕ್ರಮ್, ವಿಜಯ್, ವಿಶಾಲ್, ಹಿರಿಯ ಕಲಾವಿದ ಶಿವಕುಮಾರ್ , ಅವರ ಪುತ್ರ ಸೂರ್ಯ, ಸಂಗೀತ ರಚನೆಕಾರ ಇಳಿಯರಾಜ ಸೇರಿದಂತೆ ಕಾಲಿವುಡ್ ಚಿತ್ರರಂಗದ ಹಲವಾರು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಸಿನಿಮಾ ಕಲಾವಿದರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

Comments are closed.