ಮನೋರಂಜನೆ

ಸಲ್ಮಾನ್ ಖಾನ್ ಶಿಕ್ಷೆಯ ಬಗ್ಗೆ ಈ ನಟಿ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೋಧಪುರ ನ್ಯಾಯಾಲಯ 5 ವರ್ಷ ಶಿಕ್ಷೆ ವಿಧಿಸಿದ್ದು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್‌ ಈ ತೀರ್ಪಿನ ಕುರಿತು ನಿರಾಶೆ ವ್ಯಕ್ತಪಡಿಸಿದ್ದಾರೆ.

“ತೀರ್ಪು ನನಗೆ ನಿರಾಶೆ ತರಿಸಿದೆ, ನಟ ಸಲ್ಮಾನ್ ಖಾನ್ ಇದುವರೆಗೂ ಅನೇಕ ಮಾನವೀಕ ಕಾರ್ಯಗಳನ್ನು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಬಿಡುಗಡೆ ನಿಡಬೇಕಿದೆ” ರಾಜ್ಯಸಭಾ ಸದಸ್ಯೆ ಹೇಳಿದ್ದಾರೆ.

19 ವರ್ಷಗಳ ಹಿಂದೆ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಜೋಧಪುರ ನ್ಯಾಯಾಲಯವು ಬಾಲಿವುಡ್ ನಟನಿಗೆ 5 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು. ಅಲ್ಲದೆ ಪ್ರಕರಣದ ಸಹ ಆರೋಪಿಗಳಾಗಿದ್ದ ನಟ ಸೈಫ್ ಅಲಿ ಖಾನ್, ನಟಿಯರಾದ ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ, ಅವರುಗಳನ್ನು ಖುಲಾಸೆಗೊಳಿಸಿದೆ.

1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ವೇಳೆ ಜೋಧಪುರದ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್​ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದು ಈ ಸಂದರ್ಭ ಅವರು ಬಳಸಿದ್ದ ಬಂದೂಕಿಗೆ ಪರವಾನಿಗೆ ಇರಲಿಲ್ಲ. ಇದೇ ಕಾರಣಕ್ಕೆ ಅವರ ವಿರುದ್ಧ ಮೂರು ಪ್ರಕರಣ ದಾಖಲಾಗಿತ್ತು.

Comments are closed.