ರಾಷ್ಟ್ರೀಯ

ಲೋಕಸಭಾ ಸ್ಪೀಕರ್ ಕಚೇರಿ ಮುಂಭಾಗ ತೆಲುಗು ದೇಶಂ ಪಾರ್ಟಿಯ ಸಂಸದನಿಂದ ಧರಣಿ

Pinterest LinkedIn Tumblr

ನವದೆಹಲಿ : ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದರೂ ತೆಲುಗು ದೇಶಂ ಪಾರ್ಟಿಯ ಸಂಸದರೊಬ್ಬರು ಲೋಕಸಭೆಯ ಸ್ಪೀಕರ್ ಕಚೇರಿ ಮುಂಭಾಗ ಧರಣಿ ನಡೆಸಿದ್ದಾರೆ.

ಕಚೇರಿಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಇಲ್ಲದಿದ್ದರೂ ಈ ಸಂಸದ ಧರಣಿ ನಡೆಸುವ ಮೂಲಕ ಗಮನ ಸೆಳೆಯಲು ಯತ್ನಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಉಭಯ ಸದನಗಳಲ್ಲಿ ಟಿಡಿಪಿ ಸದಸ್ಯರು ಪ್ರತಿಭಟನೆ ನಡೆಸಿ, ಕಲಾಪಕ್ಕೆ ಅಡ್ಡಿಯುಂಟುಮಾಡಿದ್ದರು.

ರಾಜ್ಯಸಭೆಯಲ್ಲಿ ನಿನ್ನೆ ಸಭಾಪತಿ ಪೀಠದ ಮುಂಭಾಗದಿಂದ ತೆಲುಗು ದೇಶಂ ಪಕ್ಷದ ಸದಸ್ಯರು ಕದಲದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ರಾತ್ರಿ 8-15ರವರೆಗೂ ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ಪ್ರತಿಭಟನೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು.

ಈ ಮಧ್ಯೆ ಇಂದು ಪ್ರತಿಭಟನೆ ತೀವ್ರಗೊಳಿಸುವಂತೆ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ದು ಪಕ್ಷದ ಸಂಸದರಿಗೆ ಸೂಚನೆ ನೀಡಿದ್ದರು, ಅಮರಾವತಿಯಲ್ಲಿ ಇಂದು ಬೆಳಿಗ್ಗೆ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಲಾಗಿತ್ತು.

Comments are closed.