ಮನೋರಂಜನೆ

ಕಾಶ್ಮೀರ ಕುರಿತ ಪಾಕ್ ಕ್ರಿಕೆಟಿಗ ಅಫ್ರಿದಿ ಟ್ವೀಟ್ ಗೆ ಜಾವೇದ್ ಅಖ್ತರ್ ಪ್ರತ್ಯುತ್ತರ ಏನು ಗೊತ್ತೇ..?

Pinterest LinkedIn Tumblr

ಹೊಸದಿಲ್ಲಿ; “ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕಳವಳಕಾರಿ ಪರಿಸ್ಥಿತಿ ಇದೆ” ಎಂದು ಟ್ವೀಟ್ ಮಾಡಿದ್ದ ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ  ಹಿರಿಯ ಲೇಖಕ, ಕವಿ ಹಾಗೂ ಬಾಲಿವುಡ್ ಸಂಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಪ್ರತ್ಯುತ್ತರ ನೀಡಿದ್ದಾರೆ.

“ಪ್ರೀತಿಯ ಮಿಸ್ಟರ್ ಆಫ್ರಿದಿ, ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯಿಲ್ಲದ ಶಾಂತಿಯುತ ಜಮ್ಮು ಕಾಶ್ಮೀರವನ್ನು ನೀವು ನೋಡಬೇಕೆಂದಿದ್ದರೆ ದಯವಿಟ್ಟು ಪಾಕಿಸ್ತಾನಿ ಉಗ್ರರು ದೇಶದೊಳಗೆ ನುಸುಳದಂತೆ, ಪಾಕಿಸ್ತಾನಿ ಸೇನೆ ಪ್ರತ್ಯೇಕತವಾದಿಗಳಿಗೆ ಬೆಂಬಲ ನೀಡದಂತೆ ಹಾಗೂ ತರಬೇತಿ ಶಿಬಿರಗಳನ್ನು ಮುಚ್ಚುವಂತೆ  ನೋಡಿಕೊಳ್ಳಬಲ್ಲಿರಾ?, ಇದು ಸಮಸ್ಯೆ ಬಗೆಹರಿಸಲು ದೊಡ್ಡ ಸಹಾಯ ಮಾಡುವುದು” ಎಂದು ಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಅಫ್ರಿದಿ ಹೇಳಿಕೆಗೆ ತಿರುಗೇಟು ನೀಡಿದ್ದರು. ಇದೇ ಅಫ್ರಿದಿ ಕೆಲ ಸಮಯದ ಹಿಂದೆ ಸ್ವಿಝರ್ ಲ್ಯಾಂಡ್ ನಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಭಾರತದ ಧ್ವಜವನ್ನು ಫೋಟೋ ತೆಗೆಯುವ ಮುಂಚೆ ಸರಿಯಾಗಿ ಹಿಡಿದುಕೊಳ್ಳುವಂತೆ ಹೇಳಿ ಭಾರತೀಯರ ಮನಗೆದ್ದಿದ್ದರೆ ಇದೀಗ ಟ್ವಿಟರಿಗರಿಂದ ತರಾಟೆಗೊಳಗಾಗಿದ್ದಾರೆ.

Comments are closed.