ರಾಯಚೂರು: ಮಂತ್ರಾಲಯದ ಗಡಿಯಲ್ಲಿ ಪ್ರತಿಷ್ಠಾಪಿಸಲು ಯೋಜಿಸಿರುವ 33 ಅಡಿ ಎತ್ತರದ ಏಕಶಿಲಾ ಅಭಯ ಆಂಜನೇಯ ಮೂರ್ತಿಯು ಬುಧವಾರ ಮಂತ್ರಾಲಯಕ್ಕೆ ತಲುಪಿತು. ಮೂರ್ತಿಯನ್ನು ವೈಭವದೊಂದಿಗೆ ಸ್ವಾಗತಿಸಲಾಯಿತು.
ಮಂತ್ರಾಲಯದ ಬಸ್ ನಿಲ್ದಾಣದಿಂದ ರಾಯಚೂರು ಮಾರ್ಗದಲ್ಲಿರುವ ಗೋಶಾಲೆಯವರೆಗೂ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು. ಅಭಯ ಆಂಜನೇಯ ಏಕಶಿಲಾ ಮೂರ್ತಿಯನ್ನು ಬಿಡದಿ ಸಮೀಪದ ದಾಸಪ್ಪನದೊಡ್ಡಿ ಶಿಲ್ಪಕಲಾ ಕೇಂದ್ರದಲ್ಲಿ ಕೆತ್ತಲಾಗಿದೆ. ಶಿಲ್ಪಿ ಅಶೋಕ್ ಗುಡಿಗಾರ್ ಅವರು 10 ಶಿಲ್ಪಿಗಳ ನೆರವಿನೊಂದಿಗೆ ಆರು ತಿಂಗಳಲ್ಲಿ ಮೂರ್ತಿ ಕೆತ್ತನೆ ಮಾಡಿದ್ದಾರೆ.
‘ಬೆಂಗಳೂರಿನ ಉದ್ಯಮಿ ಬಿ.ಕೃಷ್ಣಪ್ಪ ಅವರು ಮೂರ್ತಿಯನ್ನು ಮಂತ್ರಾಲಯಕ್ಕೆ ಸಮರ್ಪಿಸಿದ್ದಾರೆ. ಒಂದು ಎಕರೆ ಜಾಗವನ್ನು ಅಭಯ ಆಂಜನೇಯ ಮೂರ್ತಿಗೆ ಮೀಸಲಿಡಲಾಗಿದೆ. ಆಂಜನೇಯ ಮೂರ್ತಿಯು ಧಾರ್ಮಿಕ ಶಕ್ತಿ ಕೇಂದ್ರವಾಗಲಿದೆ. ಅಭಯ ಕರುಣಿಸುವ ಪ್ರೇಕ್ಷಣೀಯ ಸ್ಥಳವಾಗಲಿದೆ’ ಎಂದು ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
Comments are closed.