ಮನೋರಂಜನೆ

‘ಬಾಗಿ 2’: ಬಿಡುಗಡೆಯಾದ ನಾಲ್ಕೇ ದಿನಕ್ಕೆ ₹85.2 ಕೋಟಿ ಗಳಿಕೆ

Pinterest LinkedIn Tumblr

ನವದೆಹಲಿ: ‘ಬಾಗಿ’ ಚಿತ್ರದ ಯಶಸ್ಸಿನ ಬಳಿಕ ಸಜೀದ್‌ ನದಿದ್ವಾಲ ಮತ್ತು ಟೈಗರ್‌ ಶ್ರಾಫ್‌ ಅವರು ‘ಬಾಗಿ 2’ರಲ್ಲಿ ಮತ್ತೊಮ್ಮೆ ಜತೆಯಾಗಿದ್ದಾರೆ.

ಅಹ್ಮದ್‌ ಖಾನ್‌ ನಿರ್ದೇಶನದ ಈ ಚಿತ್ರ ಮಾರ್ಚ್‌ 30ರಂದು ತೆರೆ ಕಂಡಿದ್ದು, ಬಿಡುಗಡೆಯಾದ 4 ನಾಲ್ಕೇ ದಿನಕ್ಕೆ ₹85.2 ಕೋಟಿ ಗಳಿಸಿದೆ.

ಚಲನಚಿತ್ರದ ಸಾಹಸಕ್ಕೆ ತಯಾರಾಗಲು ಚೀನಾದಲ್ಲಿ ವಿಶೇಷ ಸಮರ ಕಲೆಗಳ ನಿರ್ದೇಶಕ ಟೋನಿ ಚಿಂಗ್ ಅವರ ಮಾರ್ಗದರ್ಶನದಲ್ಲಿ ಟೈಗರ್‌ಗೆ ತರಬೇತಿ ನೀಡಿದ್ದರು.

ಆ್ಯಕ್ಷನ್‌ ನಾಯಕ ಬಾಗಿ 2ರ ಪೋಸ್ಟರ್‌ನಲ್ಲಿ ಬಂಡಾಯರಾರ ಪ್ರೇಮಿಯಾಗಿ ಉತ್ತಮ ದೇಹದಾರ್ಢ್ಯದೊಂದಿಗೆ ಕೈಯಲ್ಲಿ ಗನ್‌ ಹಿಡಿದು ಹಿಮ್ಮುಖದ ಪೋಸ್‌ ನೀಡಿದ್ದರು. ಚಿತ್ರದ ಪೋಸ್ಟರ್‌ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತು.

2016ರಲ್ಲಿ ತೆರೆ ಕಂಡ ‘ಬಾಗಿ’
ಶಕ್ತಿ ಕಪೂರ್ ಮುದ್ದಿನ ಮಗಳು ನಟಿ ಶ್ರದ್ಧಾ ಕಪೂರ್‌ ಸಂಗೀತ, ನೃತ್ಯ ಮತ್ತು ಕ್ರೀಡೆಯ ನಂತರ ಸಾಹಸಿಯಾಗಿ ಶಬ್ಬೀರ್‌ ಖಾನ್‌ ನಿರ್ದೇಶನದ ‘ಬಾಗಿ’ ಚಿತ್ರದಲ್ಲಿ ಮೊದಲ ಬಾರಿಗೆ ಆ್ಯಕ್ಷನ್‌ ನಟಿಯಾಗಿ ಕಾಣಿಸಿಕೊಂಡಿದ್ದರು. ‘ಬಾಗಿ’ ಚಿತ್ರದಲ್ಲಿ ಟೈಗರ್ ಶ್ರಾಫ್‌ ಜೊತೆ ಶ್ರದ್ಧಾ ಅಭಿನಯಿಸಿದ್ದರು. ಈ ಚಿತ್ರ 2016ರಲ್ಲಿ ತೆರೆ ಕಂಡಿತ್ತು.

Comments are closed.