ಕರ್ನಾಟಕ

ಸಚಿವ ರವಿಶಂಕರ್‌ ಪ್ರಸಾದ್‌, ಬಿಎಸ್‌ವೈ ಕ್ಷಮೆಗೆ ನಟ ಚೇತನ್‌ ಪಟ್ಟು

Pinterest LinkedIn Tumblr


ಬೆಂಗಳೂರು: ಬಿಜೆಪಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಡುಗಡೆ ಮಾಡಿರುವ ಚಾರ್ಜ್‌ ಶೀಟ್‌ನಲ್ಲಿ ದಿಡ್ಡಳ್ಳಿ ಹೋರಾಟವನ್ನು ಕಾಂಗ್ರೆಸ್‌ ಪ್ರೇರಿತ ನಕ್ಸಲ್‌ ಹೋರಾಟ ಎಂದು ಉಲ್ಲೇಖ ಮಾಡಿರುವ ಕುರಿತು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನಗರದ ಪ್ರಸ್‌ ಕ್ಲಬ್‌ನಲ್ಲಿ ದಿಡ್ಡಳ್ಳಿಯ ಆದಿವಾಸಿಗಳೊಂದಿಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಚೇತನ್‌ ಬಿಜೆಪಿಯ ಚಾರ್ಜ್‌ ಶೀಟ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

‘ಆದಿವಾಸಿಗಳು, ದಲಿತರು, ರೈತರು,ಶೋಷಿತರ ಪರ ಹೋರಾಟ ನಡೆಸಿದರೆ ಬಿಜೆಪಿಗೆ ಅದು ದೇಶದ್ರೋಹ ಆಗಿ ಕಾಣುತ್ತದೆ. ನಮ್ಮ ತೇಜೋವಧೆಯಾಗಿದೆ. ಕೂಡಲೆ ರವಿಶಂಕರ್‌ ಪ್ರಸಾದ್‌ ಮತ್ತು ಯಡಿಯೂರಪ್ಪ ಅವರು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೀದಿಗಳಿದು ಹೋರಾಟ ಮಾಡುತ್ತೇವೆ. ಕಾನೂನು ಪ್ರಕಾರ ಹೋರಾಟ ನಡೆಸುತ್ತೇವೆ’ ಎಂದು ಗುಡುಗಿದರು.

ವೀರಾಜಪೇಟೆಯ ದಿಡ್ಡಳ್ಳಿಯಲ್ಲಿ ನೆಲೆಸಿದ್ದ ಆದಿವಾಸಿ ಕುಟುಂಬಗಳು ಶಾಶ್ವತ ನಿವೇಶನಕ್ಕಾಗಿ ಆಗ್ರಹಿಸಿ ಹೋರಾಟ ನಡೆಸಿದ್ದರು. ಹೋರಾಟದಲ್ಲಿ ನಟ ಚೇತನ್‌ ಭಾಗಿಯಾಗಿದ್ದರು.

-ಉದಯವಾಣಿ

Comments are closed.