ರಾಷ್ಟ್ರೀಯ

ಎನ್‌ಡಿಎ ವಿರುದ್ಧ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು: ಚಂದ್ರಬಾಬು ನಾಯ್ಡು

Pinterest LinkedIn Tumblr


ದೆಹಲಿ: ಕೇಂದ್ರದ ಎನ್‌ಡಿಎ ಸರಕಾರ ಅನ್ಯಾಯದ ವಿರುದ್ಧ ಹೋರಾಡಲು ಎಲ್ಲಾ ಪ್ರದೇಶಿಕ ಪಕ್ಷಗಳು ಟಿಡಿಪಿ ಜತೆ ಕೈ ಜೋಡಿಸಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿನಂತಿಸಿದ್ದಾರೆ. ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ನಾಯ್ಡು ಇಂದು ಬೆಳಿಗ್ಗೆೆ ವಿವಿಧ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು.

ಇವತ್ತು ನನ್ನ ಆದ್ಯತೆ ನನ್ನ ರಾಜ್ಯ. ನಮ್ಮ ಬೇಡಿಕೆಗಳನ್ನು ಕೇಂದ್ರ ಕಡೆಗಣಿಸಿದ್ದರಿಂದ ಎನ್‌ಡಿಎ ಮೈತ್ರಿಕೂಟ ತೊರೆಯಬೇಕಾಯಿತು. ಇದು ಅನ್ಯಾಯದ ಪರಮಾವಧಿ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.

ಪ್ರಾದೇಶಿಕ ಪಕ್ಷಗಳು ಹಾಗೂ ಎಡರಂಗ, ಸಂಸತ್ತಿನಲ್ಲಿ ಟಿಡಿಪಿ ಕೇಂದ್ರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಸಹಕಾರ ನೀಡಬೇಕು. ನಮ್ಮ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ ಬಳಿಕ, ಬಿಜೆಪಿಯ ಅತೃಪ್ತ ನಾಯಕರಾದ ಹೇಮ ಮಾಲಿನಿ ಹಾಗೂ ಜಯಂತ್ ಸಿನ್ಹಾರನ್ನು ಭೇಟಿ ಮಾಡಿ ಚರ್ಚಿಸಿದರು.

Comments are closed.