ಕರ್ನಾಟಕ

ಕುರ್ಚಿಯಿಂದ ಜಾರಿ ಬಿದ್ದು ಸಿಎಂ ಸಿದ್ದರಾಮಯ್ಯ ತಲೆಗೆ ಪೆಟ್ಟು

Pinterest LinkedIn Tumblr


ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಕುರ್ಚಿಯಿಂದ ಜಾರಿಬಿದ್ದಿದ್ದು, ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ.

ಮಾವಿನಹಳ್ಳಿಯಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಸಿದ್ದೇಗೌಡ ಅವರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕೂರಲು ಹೋದಾಗ ಕುರ್ಚಿ ಜಾರಿತು. ಹಾಗಾಗಿ, ಸಿದ್ದರಾಮಯ್ಯ ಅವರು ಹಿಂಬದಿಗೆ ಜಾರಿ, ಅವರ ತಲೆ ಗೋಡೆಗೆ ತಗಲಿ ಸ್ವಲ್ಪ ಪೆಟ್ಟು ಬಿದ್ದಿತು. ತಕ್ಷಣವೇ ಸಾವರಿಸಿಕೊಂಡು ನೋವಿನಿಂದ ಹೊರಬಂದು ಎಂದಿನಂತೆ ಪ್ರಚಾರದಲ್ಲಿ ತೊಡಗಿಸಿಕೊಂಡರು. ಸಿದ್ದೇಗೌಡರ ಮನೆಯಲ್ಲಿ ಕೋಳಿ ಸಾಂಬಾರ್‌, ಮುದ್ದೆ ಸೇವಿಸಿ ಸ್ವಲ್ಪ ಹೊತ್ತು ವಿರಮಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಲ್ಕನೇ ದಿನದ ಚುನಾವಣೆ ಪ್ರಚಾರ ಮುಂದುವರಿಸಿದರು. ಮೂರು ದಿನಗಳಿಂದ ಒಕ್ಕಲಿಗ ಮತದಾರರು ಹೆಚ್ಚಾಗಿರುವ ಕಡೆಯಲ್ಲೆ ಪ್ರಚಾರ ನಡೆಸಿದ್ದ ಅವರು, ಕ್ಷೇತ್ರದ ಮೊದಲ ಹಂತದ ಕಡೇ ದಿನದಂದು ಅಹಿಂದ ಮತದಾರರು ಹೆಚ್ಚಾಗಿರುವಲ್ಲಿ ಸಂಚರಿಸಿದರು. ದಾರಿಪುರ, ಬರಡನಪುರ, ಮಾವಿನಹಳ್ಳಿ, ಜಯಪುರ, ಕೆಲ್ಲಹಳ್ಳಿ, ಆರೋಹಳ್ಳಿ, ಸೋಲಿಗರ ಕಾಲನಿ, ಗುಮಚನಹಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

Comments are closed.