ಮನೋರಂಜನೆ

ಜಿಮ್‌ನಲ್ಲಿ ಕರೀನಾ ಕಪೂರ್ ಸಾಹಸ ನೋಡಿ

Pinterest LinkedIn Tumblr


ಬಾಲಿವುಡ್ ತಾರೆ ಕರೀನಾ ಕಪೂರ್ (37) ಜಿಮ್‍ನಲ್ಲಿ ಬೆವರಿಳಿಸುತ್ತಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಸ್ಟ್ರೆಚಿಂಗ್ಸ್ ಮಾಡುತ್ತಿರುವ ಭಂಗಿಯಲ್ಲಿರುವ ಆ ಫೋಟೋ ಎಲ್ಲರನ್ನೂ ಸೆಳೆಯುತ್ತಿದೆ. ಒಂದು ಮಗುವಿನ ತಾಯಿಯಾದ ಬಳಿಕವೂ ಅವರು ಇಷ್ಟೆಲ್ಲಾ ಬೆವರರಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ತಾಯಿಯಾದ ಬಳಿಕ ಕರೀನಾ ಕಪೂರ್ ತೂಕ ಹೆಚ್ಚಾಗಿದ್ದರು. ಬಳಿಕ ತನ್ನ ಜಿಮ್ ಟ್ರೈನರ್ ನಮ್ರತಾ ಪುರೋಹಿತ್ ನೇತೃತ್ವದಲ್ಲಿ ವ್ಯಾಯಾಮ ಮಾಡಿ ಮತ್ತೆ ಬಳುಕುವ ಬಳ್ಳಿಯಂತಾದರು. ಅತಿ ಕಡಿಮೆ ಸಮಯದಲ್ಲಿ ಅವರಲ್ಲಾದ ಬದಲಾವಣೆ ನೋಡಿ ಎಲ್ಲರೂ ಚಕಿತರಾಗಿದ್ದಾರೆ. ಅವರ ವ್ಯಾಯಾದ ಫೋಟೋಗಳು ಈಗ ಹರಿದಾಡುತ್ತಿವೆ.

ಕರೀನಾ ಕಸರತ್ತು ಮಾಡುತ್ತಿರುವ ಒಂದು ಫೋಟೋವನ್ನು ನಮ್ರತಾ ಪುರೋಹಿತ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದರು. ಇದೀಗ ಅದು ಎಲ್ಲರ ಗಮನಸೆಳೆದಿದೆ. 2016ರಲ್ಲಿ ಬಂದಂತಹ ‘ಉಡ್ತಾ ಪಂಜಾಬ್’ ಚಿತ್ರದ ಬಳಿಕ ಕರೀನಾ ಬಣ್ಣ ಹಚ್ಚಿರಲಿಲ್ಲ. ಇದೀಗ ‘ವೀರೇ ದಿ ವೆಡ್ಡಿಂಗ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸೋನಮ್ ಕಪೂರ್, ಸ್ವರಾ ಭಾಸ್ಕರ್ ಮುಖ್ಯ ಪಾತ್ರಧಾರಿಗಳು. ಜುಲೈನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Comments are closed.