ರಾಷ್ಟ್ರೀಯ

ತುಂಡಾದ ಪಾದವನ್ನು ಕಾಲುಗಳ ನಡುವೆ ಇಟ್ಟ ವೈದ್ಯರು!

Pinterest LinkedIn Tumblr


ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನ ತುಂಡಾದ ಪಾದವನ್ನು ಆತನ ಎರಡೂ ಕಾಲುಗಳ ನಡುವೆ ಸ್ಟ್ರೆಚರಿನಲ್ಲಿಯೇ ಎರಡು ಗಂಟೆಗಳಿಗೂ ಹೆಚ್ಚು ಕಾಲ ಇರಿಸಿದ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಅತುಲ್‌ ಪಾಂಡೆ (48) ಎಂಬವರ ಕಾಲಿನ ಮೇಲೆ ರೈಲು ಹರಿದ ಕಾರಣ ಅವರೆ ಪಾದ ತುಂಡಾಗಿತ್ತು. ಕೂಡಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಅತುಲ್‌ ಪಾಂಡೆಯ ತುಂಡಾದ ಪಾದವನ್ನು ಹಾಗೆಯೇ ಸ್ಪ್ರೇಚರಿನಲ್ಲಿ ಇರಿಸಲಾಗಿತ್ತು. ಕೊನೆಗೆ ಇದನ್ನು ನೋಡಿದ ಜನರು ಫೋಟೊ ಕ್ಲಿಕ್ಕಿಸಲಾರಂಭಿಸಿದಾಗ ವೈದ್ಯರು ಎಚ್ಚರಗೊಂಡಿದ್ದರು.

ಆದರೆ, ”ವೈದ್ಯರು ರೋಗಿಯನ್ನು ನಿರ್ಲಕ್ಷ್ಯ ಮಾಡಿರಲಿಲ್ಲ. ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗಿತ್ತು,” ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಯೋಗೇಂದ್ರ ಯತಿ ಹೇಳಿದ್ದಾರೆ.

ಇತ್ತೀಚೆಗೆ ಇಂಥದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಬಸ್‌ ಅಪಘಾತವೊಂದರಲ್ಲಿ ತುಂಡಾದ ವ್ಯಕ್ತಿಯೊಬ್ಬನ ಕಾಲನ್ನು ಝಾನ್ಸಿಯ ಮಹಾರಾಣಿ ಲಕ್ಷ್ಮೇಬಾಯಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ತಲೆದಿಂಬಿನಂತೆ ಉಪಯೋಗಿಸಲಾಗಿತ್ತು.

Comments are closed.