ಮನೋರಂಜನೆ

‘ಬಾಹುಬಲಿ’ ಜತೆ ಪಾಕಿಸ್ತಾನಕ್ಕೆ ಹೊರಟ ರಾಜಮೌಳಿ

Pinterest LinkedIn Tumblr


ಬಾಹುಬಲಿ’ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಟಾಲಿವುಡ್ ನಿರ್ದೇಶಕ ಎಸ್ ಎಸ್ ರಾಜಮೌಳಿ. ಈ ಸಿನಿಮಾ ಭಾರತದಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಚಿತ್ರವಾಗಿ ದಾಖಲೆ ಸೃಷ್ಟಿಸಿದೆ ಕೂಡ. ವಿದೇಶಗಳಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

ಇತ್ತೀಚೆಗಷ್ಟೇ ಜಪಾನ್‌ನಲ್ಲೂ ಬಿಡುಗಡೆ ಮಾಡಿ ಅಲ್ಲೂ ಹವಾ ಎಬ್ಬಿಸಿತ್ತು. ಇದೀಗ ಇನ್ನೊಂದು ಅಪರೂಪದ ಗೌರವಕ್ಕೆ ಪಾತ್ರವಾಗಿದೆ ಬಾಹುಬಲಿ ಚಿತ್ರ. ಇದನ್ನು ಸ್ವತಃ ರಾಜಮೌಳಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಶೀಘ್ರದಲ್ಲೇ ಪಾಕಿಸ್ತಾನದ ಕರಾಚಿಯಲ್ಲಿ ನಡೆಯುತ್ತಿರುವ ‘ಪಾಕಿಸ್ತಾನ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ’ ರಾಜಮೌಳಿ ಭಗವಹಿಸಲಿದ್ದಾರೆ. ‘ಬಾಹುಬಲಿ ಸಿನಿಮಾ ನನಗೆ ಅದೆಷ್ಟೋ ದೇಶಗಳನ್ನು ಸುತ್ತುವ ಅವಕಾಶ ಕಲ್ಪಿಸಿತು. ಅದೆಲ್ಲವನ್ನೂ ಮೀರಿ ಈಗ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ. ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ.

Comments are closed.