ಮನೋರಂಜನೆ

ಕೇವಲ 15 ನಿಮಿಷದ ಕಾರ್ಯಕ್ರಮಕ್ಕೆ ನಟ ರಣ್ವೀರ್ ಸಿಂಗ್ ಪಡೆಯುತ್ತಿರುವುದು 5 ಕೋಟಿ ರೂ.!

Pinterest LinkedIn Tumblr

ಮುಂಬೈ : ಬಾಲಿವುಡ್’ನಲ್ಲಿ ಬೇಡಿಕೆಯ ನಟ ಎನಿಸಿಕೊಂಡಿರುವ ರಣ್ವೀರ್ ಸಿಂಗ್ ಪದ್ಮಾವತ್ ಚಿತ್ರದ ಬಳಿಕ ಅವರ ಬೆಲೆಯೂ ಕೂಡ ಬಾಲಿವುಡ್ ಅಂಗಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿದೆ.

ಅಲ್ಲಾ ವುದ್ದಿನ್ ಖಿಲ್ಜಿ ಪಾತ್ರದ ನಟನೆ ಬಳಿಕ ಬಾಲಿವುಡ್’ನಲ್ಲಿ ಬೇಡಿಕೆ ದಿಡೀರ್ ಏರಿಕೆಯಾಗಿದೆ.

ಈಗಾಗಲೇ ಅವರ ಕೈಯಲ್ಲಿ ಸಿಂಬಾ, ಗಲ್ಲಿ ಬಾಯ್ ಸೇರಿದಂತೆ ಅನೇಕ ಚಿತ್ರಗಳು ಕೈಯಲ್ಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್’ 11 ಸೀಸನ್ ಓಪನಿಂಗ್ ಸೆರೆಮನಿಯಲ್ಲಿ ತಮ್ಮ ಪ್ರದರ್ಶನವನ್ನು ನೀಡುತ್ತಿದ್ದು, 15 ನಿಮಿಷದ ಪರ್ಫಾರ್’ಮೆನ್ಸ್’ಗೆ 5 ಕೋಟಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಏಪ್ರಿಲ್ 7 ರಂದು ಐಪಿಎಲ್ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದೆ.

Comments are closed.