ಅಂತರಾಷ್ಟ್ರೀಯ

ಮಧ್ಯ ಪ್ರದೇಶದ ಪತ್ರಕರ್ತರ ಸಾವು: ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟರ್ರೆಸ್

Pinterest LinkedIn Tumblr

ವಾಷಿಂಗ್ಟನ್: ಮರಳು ಮಾಫಿಯಾ ಬಯಲಿಗೆಳೆದಿದ್ದ ಮಧ್ಯ ಪ್ರದೇಶದ ಪತ್ರಕರ್ತರ ಸಾವಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟರ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಂಟೋನಿಯೊ ಗುಟರ್ರೆಸ್ ಅವರು, ವಿಶ್ವದ ಯಾವುದೇ ಮೂಲೆಯಲ್ಲಾದರೂ ಪತ್ರಕರ್ತರ ಮೇಲಿನ ದೌರ್ಜನ್ಯ ಆತಂಕಕಾರಿ ಎಂದು ಹೇಳಿದ್ದಾರೆ ಈ ಬಗ್ಗೆ ಅವರ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಪತ್ರಕರ್ತರ ಮೇಲೆನ ದಾಳಿ ನಿಜಕ್ಕೂ ಕಳವಳಕಾರಿ. ವಿಶ್ವದ ಯಾವುದೇ ಮೂಲೆಯಲ್ಲಾದರೂ ಇಂತಹ ಬೆಳವಣಿಗೆಗಳು ನಡೆಯಬಾರದು. ಪತ್ರಕರ್ತರ ಮೇಲಿನ ದೌರ್ಜನ್ಯ ಆತಂಕಕಾರಿಯಾದುದು ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಏಶಿಯಾ ಕಾರ್ಯಕ್ರಮಗಳ ಸಂಯೋಜಕ ಸ್ಟೀವನ್ ಬಟ್ಲರ್ ಅವರು ಮಾತನಾಡಿ, ಮೃತ ಪತ್ರಕರ್ತ ಸಂದೀಪ್ ಶರ್ಮಾ ಮರಳು ಮಾಫಿಯಾ ಕುರಿತು ವರದಿ ಮಾಡಿದ್ದಕ್ಕೇ ಆತನನ್ನು ಕೊಲ್ಲಲಾಗಿದ್ದರೆ ಇದು ನಿಜಕ್ಕೂ ಆತಂಕಕಾರಿ. ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಅಲ್ಲದೆ ಇದು ಹತ್ಯೆಯೇ ಆಗಿದ್ದರೆ ಸ್ಥಳೀಯ ಆಡಳಿತದ ವೈಫಲ್ಯವೇ ಇದಕ್ಕೆ ಕಾರಣ ಎಂದು ಅವರು ಕಿಡಿಕಾರಿದ್ದಾರೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದ ಮರಳು ಮಾಫಿಯಾ ಕುರಿತು ಕುಟುಕು ಕಾರ್ಯಾಚರಣೆ ಮಾಡಿದ್ದ ಪತ್ರಕರ್ತ ಸಂದೀಪ್ ಶರ್ಮಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿಗದ್ದರು. ಮರಳು ಸಾಗಾಣಿಕಾ ಟ್ರಂಕ್ ವೊಂದು ಸಂದೀಪ್ ಸಂಚರಿಸುತ್ತಿದ್ದ ಬೈಕ್ ಮೇಲೆ ಹರಿದಿತ್ತು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳೂ ಕೂಡ ಲಭ್ಯವಾಗಿದ್ಜವು. ಈ ಘಟನೆಗೂ ಮೊದಲೇ ಪತ್ರಕರ್ತ ಸಂದೀಪ್ ತಮಗೆ ಮರಳು ಮಾಫಿಯಾದಿಂದ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ಮನವಿ ಮಾಡಿದ್ದರು.

Comments are closed.