ಮನೋರಂಜನೆ

ಆರ್ಥಿಕವಾಗಿ ಬೀದಿಗೆ ಬಿದ್ದಿದ್ದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್ !

Pinterest LinkedIn Tumblr

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ‘ವೀರ್ ಗಟಿ’ ಚಿತ್ರದಲ್ಲಿ ನಟಿಸಿ ಆಗಿನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಪೂಜಾ ದದ್ವಾಲ್ ಟಿಬಿಯಿಂದ ಬಳಲುತ್ತಿರುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದಾರೆ.

ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ ವೀರ್ ಗಟಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಪೂಜಾ ಆರೋಗ್ಯದ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದಾರೆ.

ಭೋಜ್‍ಪುರಿ ನಟ ರವಿ ಕಿಶನ್ ಈ ಹಿಂದೆ ಪೂಜಾ ಜೊತೆ ನಟಿಸಿದ್ದರು. ಸದ್ಯ ಈಗ ಅವರು ಹೈದರಾಬಾದ್‍ನಲ್ಲಿ ಎಂಎಲ್‍ಎ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ತನ್ನ ಪರಿಚಯಸ್ಥರಿಂದ ಹಣ್ಣು ಹಾಗೂ ಹಣವನ್ನು ಪೂಜಾ ಗೆ ಕಳುಹಿಸಿಕೊಟ್ಟಿದ್ದಾರೆ. ವಿನಯ್ ಲಾಡ್ ನಿರ್ದೇಶನದಲ್ಲಿ ರವಿ ಕಿಶನ್ ಹಾಗೂ ಪೂಜಾ ದದ್ವಾಲ್ ನಟಿಸಿದ್ದು, ಈ ಹಿಂದೆ ರವಿ ಕಿಶನ್ ಹಲವರಿಗೆ ಈ ರೀತಿ ಸಹಾಯ ಮಾಡಿದ್ದಾರೆ ಎಂದು ರವಿಯ ಪರಿಚಯಸ್ಥರು ತಿಳಿಸಿದ್ದಾರೆ.

ಇತ್ತೀಚಿಗೆ ಪೂಜಾ, ನಾನು ಸುಮಾರು ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಮುಂಬೈನ ಶಿವಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು.

ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು 6 ತಿಂಗಳ ಹಿಂದೆ ನನಗೆ ತಿಳಿಯಿತು. ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ನನ್ನ ಈ ವಿಡಿಯೋ ನೋಡಿದರೆ ಸಹಾಯ ಮಾಡಬಹುದೆಂಬ ಆಶಯವಿದೆ. ಕಳೆದ 15 ದಿನಗಳಿಂದ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಪೂಜಾ ಹೇಳಿದ್ದರು.

ನಾನು ಟಿಬಿ ಕಾಯಿಲೆಗೆ ತುತ್ತಾಗುವ ಮೊದಲು ಗೋವಾದ ಕೆಸಿನೋದಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಹತ್ತಿರ ಹಣವಿಲ್ಲ ಹಾಗೂ ಒಂದು ಕಪ್ ಟೀ ಕುಡಿಯಲು ನಾನು ಇನ್ನೊಬ್ಬರ ಹತ್ತಿರ ಹಣ ಕೇಳುತ್ತಿದ್ದೇನೆ ಎಂದು ನಟಿ ಪೂಜಾ ವಿಡಿಯೋದಲ್ಲಿ ತಿಳಿಸಿದ್ದರು.

ಪೂಜಾ ಆರೋಗ್ಯದ ಸಮಸ್ಯಯಿಂದ ಬಳಲುತ್ತಿರುವುದನ್ನು ನೋಡಿ ಆಕೆಯ ಪತಿ ಹಾಗೂ ಮಕ್ಕಳು ಆಕೆಯನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ನಟಿಯ ಹತ್ತಿರದವರು ತಿಳಿಸಿದ್ದರು. ಪೂಜಾ ವೀರ್ ಗಟಿ ಚಿತ್ರ ಸೇರಿದಂತೆ ಹಿಂದೂಸ್ತಾನ್ ಹಾಗೂ ಸಿಂಧೂರ್ ಸೌಗಂಧ್ ಚಿತ್ರದಲ್ಲಿ ನಟಿಸಿದ್ದಾರೆ.

Comments are closed.