ಮನೋರಂಜನೆ

ಬಂಗೀ ಜಂಪ್ ಅಪಘಾತ: ನಟಿ ನಟಾಷಾ ಸ್ಥಿತಿ ಗಂಭೀರ

Pinterest LinkedIn Tumblr


ಬಾಲಿವುಡ್ ನಟಿ, ನಿರೂಪಕಿ, ಫೆಮೀನಾ ಮಿಸ್ ಇಂಡಿಯಾ 2006 ನಟಾಷಾ ಸೂರಿ ಭಾರಿ ದುರಂತಕ್ಕೆ ಸಿಲುಕಿದ್ದಾರೆ. ಬಂಗೀ ಜಂಪ್ ಮಾಡುತ್ತಿದ್ದಾಗ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಇಂಡೋನೇಷಿಯಾದಲ್ಲಿ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ನಟಾಷಾರನ್ನು ಆಹ್ವಾನಿಸಲಾಗಿತ್ತು. ಇಂಡೋನೇಷ್ಯಾದಲ್ಲಿ ಲಗ್ಜುರಿ ಮಳಿಗೆಯೊಂದನ್ನು ಉದ್ಘಾಟಿಸಿದ್ದಾರೆ ನಟಾಷಾ.

ಅಡ್ವೆಂಚರ್ ಟಿಪ್ಸ್: ಬಂಗೀ ಜಿಗಿತ

ಸಹಜವಾಗಿ ಸಾಹಸ ಕ್ರೀಡೆಗಳಲ್ಲಿ ಭಾಗಿಯಾವುದು, ಸಾಹಸಗಳನ್ನು ಮಾಡುವುದು ಅವರಿಗೆ ಅಭ್ಯಾಸ. ಮಳಿಗೆ ಉದ್ಘಾಟಿಸಿದ ಬಳಿಕ ಬಂಗೀ ಜಿಗಿತ ಮಾಡಲು ಹೋದರು. ತುಂಬಾ ಎತ್ತರದಿಂದ ಅವರು ಬಂಗಿ ಜಂಪ್ ಮಾಡಿದಾಗ ಸೊಂಟಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿ ಅವರು ಕಂದಕಕ್ಕೆ ಬಿದ್ದರು ಎಂಬ ಮಾಹಿತಿ ಇದೆ.

ಆದರೆ ಕೆಳಗೆ ಕಲ್ಲುಗುಂಡುಗಳು ಇಲ್ಲದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. 24 ಗಂಟೆಗಳ ಬಳಿಕವಷ್ಟೇ ನಟಾಷಾ ಸೂರಿ ಪರಿಸ್ಥಿತಿಯನ್ನು ತಿಳಿಸಬಹುದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮಿಸ್ ವರ್ಲ್ಡ್ 2006 ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನಟಾಷಾ ಟಾಪ್ 10ರಲ್ಲಿ ಗೆದ್ದಿದ್ದರು. ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ನಟಾಷಾ 2016ರಲ್ಲಿ ದಕ್ಷಿಣದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ದಿಲೀಪ್ ಜತೆ ‘ಕಿಂಗ್ ಲಯನ್’ ಎಂಬ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Comments are closed.