ಮನೋರಂಜನೆ

ದುಬೈನಲ್ಲಿ ಬಿಡುಗಡೆಯಾಗಲಿದೆ ‘ಅಸತೋಮ ಸದ್ಗಮಯ’ ಚಿತ್ರದ ಟ್ರೈಲರ್​

Pinterest LinkedIn Tumblr

ಸೆಟ್ಟೇರಿದಾಗಿನಿಂದ ಸುದ್ದಿ ಮಾಡುತ್ತಿರೋ ‘ಅಸತೋಮ ಸದ್ಗಮಯ’ ಸಿನಿಮಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದೂ ಕೂಡ ಟ್ರೈಲರ್​ನಿಂದಾಗಿ. ಹೌದು ಈ ಸಿನಿಮಾದ ಟ್ರೈಲರ್​ ಅನ್ನು ದುಬೈನಲ್ಲಿ ಬಿಡುಗಡೆ ಮಾಡೋಕೆ ವೇದಿಕೆ ಸಜ್ಜಾಗುತ್ತಿದೆ. ಇದೇ ಬರುವ ಮಾರ್ಚ್ 23ರಂದು ದುಬೈನ ಹೋಟೇಲ್ ಫಾರ್ಚೂನ್ ಪ್ಲಾಝಾ ಟ್ರೈಲರ್​ ಲಾಂಚ್​ ಕಾರ್ಯಕ್ರಮ ನಡೆಲಿದೆ.

‘ದುಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ದುಬೈನ ಗಣ್ಯಾತಿಗಣ್ಯ ಅನಿವಾಸಿ ಕನ್ನಡಿಗರ ಸಮ್ಮುಖದಲ್ಲಿ ಇದರ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಕನ್ನಡ ಚಿತ್ರವೊಂದರ ಟ್ರೈಲರ್ ದುಬೈನಲ್ಲಿ ಬಿಡುಗಡೆಗೊಳ್ಳಲಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಅದರಲ್ಲೂ ಅದು ನಾನು ನಿರ್ದೇಶಿಸಿರುವ ಚಿತ್ರವಾಗಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ’ ಎನ್ನುತ್ತಾರೆ ನಿರ್ದೇಶಕ ರಾಜೇಶ್ ವೇಣೂರ್.

ಇದು ಇಂದಿನ ತಲೆಮಾರಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಇರೋ ಚಿತ್ರವಾಗಿದ್ದರೂ, ಸಂಪೂರ್ಣವಾಗಿ ಸಾಂಸಾರಿಕ ಚಿತ್ರವಂತೆ. ಇದರ ಹಾಡುಗಳು ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಗಿದೆ. ಚಿತ್ರದ ಆಡಿಯೋ ಸಿಡಿ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನುತ್ತದೆ ಚಿತ್ರತಂಡ.

ಈ ಸಿನಿಮಾದಲ್ಲಿ ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಿರಣ್ ರಾಜ್, ಲಾಸ್ಯಾ ನಾಗರಾಜ್ ಹಾಗೂ ಬೇಬಿ ಚಿತ್ರಾಲಿ ಪ್ರಮುಖ ತಾರಾಗಣದಲ್ಲಿದ್ದಾರೆ. ಅಸತೋಮ ಸದ್ಗಮಯ ಚಿತ್ರವನ್ನ ಐಕೇರ್ ಮೂವೀಸ್ ಬ್ಯಾನರ್​ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಅಶ್ವಿನ್ ಪಿರೇರಾರವರು ನಿರ್ಮಿಸುತ್ತಿದ್ದಾರೆ. ತನ್ನ ವಿಶಿಷ್ಟ ಪೋಸ್ಟರ್‍ಗಳಿಂದಂಲೇ ಕುತೂಹಲ ಹುಟ್ಟಿಸಿದ್ದ ‘ಅಸತೋಮ ಸದ್ಗಮಯ’ ಚಿತ್ರದ ಟ್ರೈಲರ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತ ಎಂದು ಕಾದುನೋಡಬೇಕಿದೆ.

Comments are closed.