ಕರ್ನಾಟಕ

ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನು ರೈಲಿನಿಂದ ತಳ್ಳಿ ಹತ್ಯೆ

Pinterest LinkedIn Tumblr

ಬೆಳಗಾವಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನು ರೈಲಿನಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪುನಂ (22) ಪ್ರಿಯಕರನಿಂದ ಹತ್ಯೆಯಾದ ಯುವತಿ. ಅಸ್ಟೋಳಿ ಗ್ರಾಮದ ರೈಲ್ವೆ ಸೇತುವೆ ಬಳಿ ಮಾರ್ಚ್ 15 ರಂದು ಪುನಂ ಶವ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಾಳ ಪೋಷಕರು ಇದು ಕೊಲೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಖಾನಾಪುರ ಪೊಲೀಸರ ಬಲೆಗೆ ಕೊಲೆ ಮಾಡಿದ್ದ ಸಹೋದರರು ಸಿಕ್ಕಿದ್ದಾರೆ. ಬಿಎಚ್‍ಎಂಎಸ್ ವೈದ್ಯ ಸುನೀಲ್ ನನ್ನು ಮೃತ ಪುನಂ ಪ್ರೀತಿಸುತ್ತಿದ್ದಳು. ಆದರೆ ಪುನಂ ಇತ್ತೀಚೆಗೆ ಮದುವೆ ಮಾಡಿಕೊಳ್ಳುವಂತೆ ಸುನೀಲ್ ನನ್ನು ಒತ್ತಾಯಿಸಿದ್ದಳು. ಆದರೆ ಸುನೀಲ್ ಅಂತರ್ ಜಾತಿ ಹಿನ್ನೆಲೆಯಲ್ಲಿ ಮದುವೆಯನ್ನು ನಿರಾಕರಿಸಿದ್ದಾನೆ.

ಪುನಂ ಮತ್ತೆ ಮತ್ತೆ ಮದುವೆ ಒತ್ತಾಯಿಸಿದ್ದರಿಮದ ಸುನೀಲ್ ತನ್ನ ಸಹೋದರ ಸಂಜಯ ಜೊತೆ ಪುನಂ ಮುಗಿಸಲು ಪ್ಲಾನ್ ಮಾಡಿದ್ದಾನೆ. ಅದರಂತೆಯೇ ಗೋವಾ ಪ್ರವಾಸದ ನೆಪದಲ್ಲಿ ಪುನಂ ಕರೆದು ಕೊಂಡು ಹೋಗಿದ್ದಾನೆ. ನಂತರ ರೈಲಿನಿಂದ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯಕ್ಕೆ ಖಾನಾಪುರ ಪೊಲೀಸರು ಆರೋಪಿಗಳಾದ ವೈದ್ಯ ಸುನೀಲ್ ಮತ್ತು ಸಂಜಯ್ ನನ್ನ ಬಂಧಿಸಿದ್ದಾರೆ.

Comments are closed.