ಮನೋರಂಜನೆ

ಶಕೀಲಾ ಜೀವನ ಸಿನಿಮಾ ಇಂದ್ರಜಿತ್‌ ನಿರ್ದೇಶನ

Pinterest LinkedIn Tumblr


ನವದೆಹಲಿ: 90ರ ದಶಕದಲ್ಲಿ ಮಲಯಾಳಂ ಚಿತ್ರರಂಗವನ್ನು ಆಳಿದ ವಯಸ್ಕರ ಚಿತ್ರಗಳ ತಾರೆ ಶಕೀಲಾ ಅವರ ಬದುಕಿನ ನೈಜ ಘಟನೆಗಳನ್ನಾಧರಿಸಿದ ಸಿನಿಮಾ ಮುಂದಿನ ತಿಂಗಳಿಂದ ಆರಂಭವಾಗಲಿದೆ. ಅದರಲ್ಲಿ ಬಾಲಿವುಡ್‌ನ‌ಟಿ ರಿಚಾ ಛಡ್ಡಾ ಶಕೀಲಾ ಪಾತ್ರ ನಿರ್ವಹಿಸಲಿದ್ದಾರೆ. ಕನ್ನಡದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಿರ್ದೇಶಿಸಲಿರುವ ಈ ಚಿತ್ರದ ಚಿತ್ರಕಥೆ ಹಾಗೂ ನಿರ್ಮಾಣ ಪೂರ್ವ ತಯಾರಿಗಳನ್ನು ಮಾಡಲಾಗುತ್ತಿದ್ದು, ಮುಂದಿನ ತಿಂಗಳು ಶೂಟಿಂಗ್‌ ಆರಂಭವಾಗಲಿದೆ.

ಹದಿನಾರನೇ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟ ಶಕೀಲಾ, ಕನ್ನಡ, ಮಲಯಾಳಂ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ವಿಶೇಷವಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸಿ ದಾಖಲೆ ಬರೆದರು.

-ಉದಯವಾಣಿ

Comments are closed.