ಮನೋರಂಜನೆ

ಹೊಸ ಅತಿಥಿಯನ್ನು ಸುದೀಪ್‌ ಮನೆಗೆ ಕೊಂಡೊಯ್ದ ಬಿಗ್ ಬಾಸ್ ದಿವಾಕರ್‌

Pinterest LinkedIn Tumblr

ಬಿಗ್‌ಬಾಸ್‌ ರನ್ನರ್‌ ಅಪ್‌ ದಿವಾಕರ್‌ ಇತ್ತೀಚೆಗೆ ಹೊಸ ಕಾರು ಕೊಂಡಿದ್ದು, ಈ ಕಾರನ್ನು ಸುದೀಪ್‌ ಡ್ರೈವ್‌ ಮಾಡಿ ದಿವಾಕರ್‌ಗೆ ಶುಭ ಕೋರಿದ್ದಾರೆ. ದಿವಾಕರ್‌ ಕಾರು ಕೊಂಡವರೇ ನೇರವಾಗಿ ಸುದೀಪ್‌ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಹೊಸ ಕಾರು ಕೊಂಡ ಮೇಲೆ ಸುದೀಪ್‌ ಅವರಿಂದ ಡ್ರೈವ್‌ ಮಾಡಿಸಬೇಕು ಎಂಬುದು ದಿವಾಕರ್‌ ಆಸೆಯಾಗಿತ್ತಂತೆ.

ನಾನು ಬಿಗ್‌ಬಾಸ್‌ ರನ್ನರ್‌ ಅಪ್‌ ಆದಾಗ ಸುದೀಪ್‌ ಅವರು ನನಗೆ ಅಣ್ಣನ ಹಾಗೆ ನಿಂತು ಜೀವನದ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದರು. ನಾನು ಹೊಸ ಕಾರು ಕೊಂಡರೆ ಅದನ್ನು ಸುದೀಪ್‌ ಕೈಯಲ್ಲಿ ಡ್ರೈವ್‌ ಮಾಡಿಸಬೇಕು ಎಂದು ಆಗಲೇ ಅಂದುಕೊಂಡಿದ್ದೆ. ಅದನ್ನು ಈಗ ಈಡೇರಿಸಿಕೊಂಡಿದ್ದೇನೆ ಎಂದು ದಿವಾಕರ್‌ ಹೇಳಿದ್ದಾರೆ.

Comments are closed.