ಮನೋರಂಜನೆ

ಪ್ರಜಾಕೀಯದಲ್ಲಿ ಅಪಸ್ವರ; ಕೆಪಿಜೆಪಿಯಿಂದ ನಟ ಉಪೇಂದ್ರಗೆ ಗೇಟ್ ಪಾಸ್?

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ದಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದು ಈ ನಿಟ್ಟಿನಲ್ಲಿ ಉಪೇಂದ್ರ ಅವರು ಪಕ್ಷದಿಂದ ಹೊರಬರಲಿದ್ದಾರೆಯೇ ಎಂಬ ಚರ್ಚೆ ನಡೆಯತೊಡಗಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಹಾಗೂ ನಟ ಉಪೇಂದ್ರ ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂದು ವರದಿ ಹೇಳಿದೆ.

ಕರ್ನಾಟಕ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಅವರ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಸೋಮವಾರ 3ಗಂಟೆಗೆ ನಡೆಯಲಿರುವ ರಾಷ್ಟ್ರೀಯ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಪಿಜೆಪಿ ಉಪಾಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ನಟ ಉಪೇಂದ್ರ ವರ್ತನೆಯಿಂದ ಬೇಸರವಾಗಿದೆ. ಮಾರ್ಚ್ 3ರಂದು ಕೆಪಿಜೆಪಿ ಕಚೇರಿಯಲ್ಲಿ ಸಭೆ ಕರೆದಿದ್ದೇವು. ಚುನಾವಣಾ ತಯಾರಿಗೆ ಸಂಬಂಧಿಸಿದಂತೆ ಸಭೆ, ಆದರೆ ನಟ ಉಪೇಂದ್ರ ಅವರು ಗೈರು ಹಾಜರಾಗಿದ್ದು, ಸಹೋದರ ಸುಧೀಂದ್ರ ಅವರನ್ನು ಕಳುಹಿಸಿಕೊಟ್ಟಿದ್ದರು. ಪಕ್ಷ ಸಂಘಟನೆ ಸಂಬಂಧ ಕೆಪಿಜೆಪಿ ಮುಖ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಬಂದಿತ್ತು ಎಂದು ಶಿವಕುಮಾರ್ ಹೇಳಿದ್ದಾರೆ.

ಮಹೇಶ್ ಗೌಡ ಹೇಳೋದೇನು?

ಉಪೇಂದ್ರ ಅವರು ಜೊತೆಯಾಗಿ ಹೋಗೋಣ ಎಂದಿದ್ದರು. ವಿವಿಧ ತಂಡಗಳಲ್ಲಿ ರಾಜ್ಯವನ್ನು ಸುತ್ತಿ ಬಂದಿದ್ದೇವೆ. ನಿನ್ನೆ ಸಂಜೆ ಮಾತನಾಡಲು ಪ್ರಯತ್ನಿಸಿದೆ, ಆದರೆ ನಿನ್ನೆ ಸಂಜೆಯೇ ಎಲ್ಲಾ ಮುಗಿಯಿತು ಎಂದು ಉಪೇಂದ್ರ ಹೇಳಿದರು. ಟಿಕೆಟ್ ಹಂಚಿಕೆ ಅಧಿಕಾರ ತನಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ನಮ್ಮ ರಾಷ್ಟ್ರೀಯ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ತನಗೆ ಅಧಿಕಾರ ಕೊಡದಿದ್ದರೆ ಪಕ್ಷ ತೊರೆಯುವುದಾಗಿ ಎಚ್ಚರಿಕೆ ನೀಡಿದ್ದರು. ಎಂದು ಕೆಪಿಜೆಪಿ ಮುಖ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ತಿಳಿಸಿದ್ದಾರೆ.

-ಉದಯವಾಣಿ

Comments are closed.