ರಾಷ್ಟ್ರೀಯ

ಅತ್ಯಾಚಾರಿ ಮಾವನನ್ನು ಗಂಡನೊಂದಿಗೆ ಸೇರಿ ಕೊಲೆಗೈದ ಹೆಂಡತಿ!

Pinterest LinkedIn Tumblr


ಪಿಲಿಭಿತ್‌: ಹೆಂಡತಿ ಮೇಲೆ ಅತ್ಯಾಚಾರ ಎಸಗಿದ ಅಪ್ಪನನ್ನು ಹೆಂಡತಿ ಹಾಗೂ ಮಗ ಜತೆಗೂಡಿ ಕಬ್ಬಿಣದ ಸಲಾಕೆಯಿಂದ ಚುಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ.

ಮಾಹಿತಿಗಳ ಪ್ರಕಾರ ಶುಕ್ರವಾರದಂದು ಮಹಿಳೆಯ ಗಂಡ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಮಾವ ಅತ್ಯಾಚಾರ ಎಸಗಿದ್ದಾನೆ, ಬಳಿಕ ತನ್ನಿಂದ ತಪ್ಪಾಯಿತು ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಬೇಡಿಕೊಂಡಿದ್ದಾನೆ, ಹೀಗಾಗಿ ಅಂದು ಆತನನ್ನು ನಾನು ಕ್ಷಮಿಸಿ ನಡೆದ ಘಟನೆಯನ್ನು ಗಂಡನಿಗೂ ಹೇಳದೆ ಸುಮ್ಮನಿದ್ದೆ’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಆದರೆ ಶನಿವಾರ ರಾತ್ರಿ ಆಕೆಯ ಗಂಡ ವರಾಂಡದಲ್ಲಿ ಮಲಗಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಆಕೆಯ ಮೇಲೆ ಮುಗಿದ್ದ ಮಾವ ಅತ್ಯಾಚಾರ ಎಸಗಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಹೆಂಡತಿಯ ಮೇಲೆ ನಡೆದ ಅತ್ಯಾಚಾರವನ್ನು ಗಂಡ ಕೂಡಾ ನೋಡಿದ್ದಾನೆ. ಸಿಟ್ಟುಗೊಂಡ ಇಬ್ಬರೂ ಅತ್ಯಾಚಾರಿಯನ್ನು ಹರಿತವಾದ ಕಬ್ಬಿಣದ ಸಲಾಕೆಯಿಂದ ಇರಿದು ಕೊಲೆ ಮಾಡಿದ್ದಾರೆ.

‘ಹೆಂಡತಿ ಮೇಲೆ ತಂದೆ ನಡೆಸಿದ ಅತ್ಯಾಚಾರವನ್ನು ಕಣ್ಣಾರೆ ನೋಡಿದೆ, ಒಂದು ವೇಳೆ ಇದನ್ನು ಹೀಗೆಯೇ ಬಿಟ್ಟರೆ ಬೇರೆ ಹಂತಕ್ಕೆ ತಲುಪಬಹುದು ಎಂದು ಯೋಚಿಸಿದೆ. ಇವರು ಮಾಡಿದ ತಪ್ಪಿಗೆ ಕೊಲೆ ಮಾಡಲು ನಿರ್ಧರಿಸಿದೆ’ ಎಂದು ಮಗ ಹೇಳಿಕೊಂಡಿದ್ದಾರೆ.

ಗ್ರಾಮಸ್ಥರ ಪ್ರಕಾರ ಕೊಲೆಯಾದ ವ್ಯಕ್ತಿಯ ಹೆಂಡತಿ, ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು, ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರಂತೆ.

Comments are closed.