ಮನೋರಂಜನೆ

ಕಣ್ಸನ್ನೆ ಮೂಲಕ ಸ್ಟಾರ್ ಆದ ಬೆಡಗಿ ಒಂದು ಪೋಸ್ಟ್ ಗೆ ಪಡೆಯುವ ಸಂಭಾವನೆ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಿ!

Pinterest LinkedIn Tumblr

ಮುಂಬೈ: ಕಣ್ಸನ್ನೆ ಮೂಲಕ ಇಡೀ ಇಂಟರ್ ನೆಟ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಅದೃಷ್ಟದ ಮೇಲೆ ಅದೃಷ್ಟ ಖುಲಾಯಿಸುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಣಿಯಾಗಿ ಮಿಂಚುತ್ತಿದ್ದಾರೆ.

ಇನ್ ಸ್ಟಾಗ್ರಾಮ್ ಇತಿಹಾಸದಲ್ಲಿ ಭಾರತದ ಪರ ಹೊಸ ದಾಖಲೆ ಬರೆದ ಪ್ರಿಯಾ ಒಂದು ಪೋಸ್ಟ್ ಗೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಾಧಾರಣವಾಗಿ ಚಿತ್ರರಂಗದ ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಂಪೆನಿಗಳ ಪೋಸ್ಟ್ ಗಳನ್ನು ಪ್ರಚಾರ ಮಾಡುತ್ತಾರೆ. ಆದರೆ ಅವರು ಯಾರು ಇಷ್ಟೊಂದು ಮೊತ್ತವನ್ನು ಪಡೆಯುವುದಿಲ್ಲ ಎಂದು ವರದಿಯಾಗಿದೆ. ಈಗ ಇನ್ ಸ್ಟಾಗ್ರಾಮ್ ನಲ್ಲೇ 8 ಲಕ್ಷ ರೂ. ಪಡೆಯುತ್ತಿರುವ ಪ್ರಿಯಾ, ಇನ್ನು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಿಂದ ಎಷ್ಟು ಸಂಭಾವನೆ ಪಡೆಯಬಹುದು ಎಂದು ಅಭಿಮಾನಿಗಳು ಈಗ ಲೆಕ್ಕಾಚಾರ ಹಾಕುತ್ತಿದ್ದಾರೆ.

ಪ್ರಿಯಾ ವಾರಿಯರ್ ಜನಪ್ರಿಯತೆ ಎಷ್ಟಿದೆ ಅಂದರೆ ಇನ್ ಸ್ಟಾಗ್ರಾಮ್ ನಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹಿಂದಿಕ್ಕಿದ್ದಾರೆ. ಪ್ರಿಯಾಗೆ 51 ಲಕ್ಷ ಮಂದಿ ಫಾಲೋವರ್ ಗಳಿದ್ದರೆ, 41 ಲಕ್ಷ ಮಂದಿ ಜುಕರ್ ಬರ್ಗ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೊಚ್ಚಲ ಸಿನಿಮಾ ‘ಒರು ಆಡಾರ್ ಲವ್’ ಜೂನ್ ತಿಂಗಳಲ್ಲಿ ತೆರೆಕಾಣಲಿದೆ. ಬರಿ ಟೀಸರ್ ಮೂಲಕವೇ ಈ ಮಟ್ಟದ ಯಶಸ್ಸು ಪಡೆದುಕೊಂಡಿರುವ ನಟಿಯಾಗಿದ್ದಾರೆ.

Comments are closed.