ಮನೋರಂಜನೆ

ನಟಿ ಶ್ರೀದೇವಿಯೊಂದಿಗೆ ಮೂರು ದಿನ ಮಾತು ಬಿಟ್ಟಿದ್ದಳಂತೆ ಪುತ್ರಿ ಜಾನ್ವಿ !

Pinterest LinkedIn Tumblr

ಬಾಲಿವುಡ್ ನಟಿ ಶ್ರೀದೇವಿ ತಮ್ಮ ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಚಿತ್ರರಂಗದಿಂದ ಕೆಲ ವರ್ಷಗಳವರೆಗೆ ದೂರವಿದ್ದರು. ಅವರ ಮಕ್ಕಳಾದ ಜಾನ್ವಿ ಹಾಗೂ ಖುಷಿ ಕೂಡ ತಮ್ಮ ತಾಯಿಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದರು.

ಇಂದು ನಟಿ ಶ್ರೀದೇವಿ ತಮ್ಮ ಕುಟುಂಬದಿಂದ ದೂರವಾಗಿದ್ದಾರೆ. ತಾಯಿಯನ್ನು ಕಳೆದುಕೊಂಡಿರುವ ಜಾನ್ವಿ ದುಃಖದಲ್ಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀದೇವಿ ಅವರ ಹಳೆಯ ಸಂದರ್ಶನವೊಂದು ನೆನಪಾಗುತ್ತಿದೆ. ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ಜಾನ್ವಿ ತನ್ನ ಜತೆ ಮೂರು ದಿನ ಮಾತು ಬಿಟ್ಟಿದ್ದನ್ನು ಹೇಳಿಕೊಂಡಿದ್ದರು ಶ್ರೀದೇವಿ.

ಶ್ರೀದೇವಿ ಹಾಗೂ ಕಮಲ್ ಹಾಸನ್ ಒಟ್ಟಾಗಿ ನಟಿಸಿದ್ದ ಸದ್ಮಾ ಚಿತ್ರ ನೋಡಿದ್ದ ಜಾನ್ವಿ, ತಮ್ಮ ತಾಯಿ ಶ್ರೀದೇವಿಯನ್ನು ‘ನೀನು ಬ್ಯಾಡ್‌ ಮಾಮ್’ ಎಂದು ಹೇಳಿ ಮೂರು ದಿನಗಳವರೆಗೆ ಮಾತು ಬಿಟ್ಟಿದ್ದಳಂತೆ. ಈ ಸಂದರ್ಭದಲ್ಲಿ ಜಾನ್ವಿ 6 ವರ್ಷದ ಪುಟ್ಟ ಬಾಲಕಿಯಾಗಿದ್ದಳಂತೆ.

ಸದ್ಮಾ ಚಿತ್ರ ತಮ್ಮ ಮಗಳ ಮೇಲೆ ಬೀರಿದ್ದ ಪ್ರಭಾವವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದರು ನಟಿ ಶ್ರೀದೇವಿ.

Comments are closed.