ಕೊಚ್ಚಿ: ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ. ಇದು ಮಗುವಿಗೆ ಸದೃಢ ಬೆಳವಣಿಗೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಹಾಗಿರಬೇಕೆಂದರೆ ಕೇರಳದಲ್ಲಿ ಮಲಯಾಳಂ ಮಾಡೆಲ್ ಒಬ್ಬಾಕೆ ಜನಪ್ರಿಯ ಜೀವನಶೈಲಿ ನಿಯತಕಾಲಿಕವೊಂದಕ್ಕೆ ನಗ್ನ ಸ್ತನ್ಯಪಾನದ ಫೋಟೋಶೂಟ್ ಮಾಡಿರುವುದು ಭಾರಿ ವಿವಾದಕ್ಕೆ ಎಡೆ ಮಾಡಿದೆ.
ಕೇರಳದ ಜನಪ್ರಿಯ ಪತ್ರಿಕೆ ಮಾತೃಭೂಮಿ ಪಬ್ಲೀಕೇಷನ್ಸ್ ಅಧೀನತೆಯಲ್ಲಿರುವ ಗೃಹಲಕ್ಷ್ಮೀ ಎಂಬ ಮ್ಯಾಗಜೀನ್‌ನ ಮುಖಪುಟದಲ್ಲಿ ತಾಯಿ ಮಗುವಿಗೆ ಹಾಲುಣಿಸುವ ಚಿತ್ರದಲ್ಲಿ ಮಾಡೆಲ್ ಹಾಗೂ ನಟಿ ಗಿಲು ಜೋಸೆಫ್ ಕಾಣಿಸಿಕೊಂಡಿದ್ದಾರೆ.
ಸಾರ್ವಜನಿಕವಾಗಿ ಸ್ತನ್ಯಪಾನ ಮಾಡುವ ಆಂದೋಲನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿಯತಕಾಲಿಕವು ಇಂತಹದೊಂದು ವಿವಾದತ್ಮಕ ಚಿತ್ರವನ್ನು ಹೊರಡಿಸಿದೆ. ಇದರ ವಿರುದ್ಧ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಮ್ಯಾಗಜೀನ್ ಮುಖಪುಟದಲ್ಲಿ ‘ನಮ್ಮತ್ತ ದಿಟ್ಟಿಸಿ ನೋಡದಿರಿ. ನಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಬೇಕು’ ಎಂದು ಮಾತೆಯರು ಕೇರಳ ಜನತೆಯಲ್ಲಿ ವಿನಂತಿಸುವ ಕುರಿತಾಗಿ ಉಲ್ಲೇಖಿಸಲಾಗಿದೆ.
ಅತ್ತ ನಿಯತಕಾಲಿಕಕ್ಕೆ ತಾವು ನೀಡಿರುವ ಫೋಟೋಶೂಟ್ ಸಮರ್ಥಿಸಿಕೊಂಡಿರುವ ರೂಪದರ್ಶಿ ಗಿಲು ಜೋಸೆಫ್, ‘ನಾನು ಸರಿಯಾಗಿರುವುದನ್ನೇ ಮಾಡಿದ್ದೇನೆ. ನಾನು ಮದುವೆ ಆಗಿಲ್ಲ, ತಾಯಿ ಆಗಿಲ್ಲ. ಆದರೆ ಮ್ಯಾಗಜೀನ್ ವಿನಂತಿಸಿಕೊಂಡಾಗ ಧೈರ್ಯದಿಂದ ಒಪ್ಪಿಕೊಂಡಿದ್ದೇನೆ’ ಎಂದಿದ್ದಾರೆ.
ಮಗದೊಂದು ವಿಭಾಗದಿಂದ ಮ್ಯಾಗಜೀನ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಈ ನಗ್ನ ಸ್ಯನ್ಯಪಾನ ಮ್ಯಾಗಜೀನ್ ತನ್ನ ವ್ಯಾಪಾರ ಕುದುರಿಸಿಕೊಳ್ಳುವ ಮಾಡುವ ಕುತಂತ್ರವಿದು ಎಂದು ಆರೋಪಿಸಲಾಗಿದೆ.