ಮುಂಬೈ: ಅನಿರೀಕ್ಷಿತವಾಗಿ ಇಹ ಲೋಕವನ್ನು ತೊರೆದ ಭಾರತೀಯ ಚಿತ್ರರಂಗದ ಮೋಹಕ ತಾರೆ ಖ್ಯಾತ ನಟಿ ಶ್ರೀದೇವಿ ಅವರು ಸಾವಿಗೂ ಮುನ್ನ ದಿನ ಬಾಲಿವುಡ್ ನಟ ಅನಿಲ್ ಕಪೂರ್ ಜತೆ ಸಮಾರಂಭದಲ್ಲಿ ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಬಂಧಿಕರ ಮದುವೆಗೆಂದು ಶ್ರೀದೇವಿ ಅವರು ಕುಟುಂಬ ಸಮೇತರಾಗಿ ದುಬೈಗೆ ತೆರಳಿದ್ದರು. ದುರಾದೃಷ್ಠವಶಾತ್ ತಾವು ತಂಗಿದ್ದ ಕೋಣೆಯ ಬಾತ್ ಟಬ್ ನಲ್ಲಿ ಮುಳುಗಿ ಅಸುನೀಗಿದ್ದರು. ಶ್ರೀದೇವಿ ಅವರ ಅನಿರೀಕ್ಷಿತ ಸಾವು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನೋವಿನ ವಿಷಯವಾಗಿದೆ.
ಈ ಮಧ್ಯೆ ಅವರು ಮದುವೆ ಸಮಾರಂಭದಲ್ಲಿ ಶ್ರೀದೇವಿ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಜತೆ ಚಿತಿಯಾನ್ ಕಲೈಯಾನ್ ಹಾಡಿಗೆ ಖುಷಿಯಿಂದ ನೃತ್ಯ ಮಾಡಿರುವ ವಿಡಿಯೋವನ್ನು ಅಭಿಮಾನಿಯೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಬೈನ ಎಮಿರೇಟ್ಸ್ ಟವರ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀದೇವಿ ಅವರು ಬಾತ್‌ರೂಮ್‌ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್‌ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ತಿಳಿಸಲಾಗಿದೆ.