ಮನೋರಂಜನೆ

ಬಾತ್‌ಟಬ್‌ನಲ್ಲಿ ಮುಳುಗಿ ಸಾವು ಅಸಹಜವಲ್ಲ

Pinterest LinkedIn Tumblr


ಮುಂಬಯಿ: ಸೌಂದರ್ಯದ ಖನಿ ಶ್ರೀದೇವಿ ಸಾವು ನಿಗೂಢವಾಗಿಯೇ ಉಳಿದಿದೆ. ಮೊದಲಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಬಂದಿತು. ಇದೀಗ ಅವರ ಸಾವಿನ ಸುತ್ತ ಹಲವಾರು ಅನುಮಾನಗಳು ಎದ್ದಿವೆ.

ಸೋಮವಾರ ಸಂಜೆ ಬಿಡುಗಡೆಯಾದ ಫೊರೆನ್ಸಿಕ್‌ ವರದಿ, ಆಕೆ ಪ್ರಜ್ಞೆ ತಪ್ಪಿ ಬಾತ್‌ ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದು, ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವು ಎಂದು ಷರಾ ಬರೆದಿದೆ.

ಈ ಸುದ್ದಿ ಹೊರ ಬರುತ್ತಿದ್ದಂತೆ ಬಾತ್‌ಟಬ್‌ನಲ್ಲಿ ಬಿದ್ದು ಸಾಯಲು ಸಾಧ್ಯವೇ ಎಂಬ ಸಂಶಯ ಹಲವರಲ್ಲಿ ಮನೆ ಮಾಡಿದೆ.

ಆದರೆ ಬಾತ್‌ಟಬ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ. ಭಾರತದಲ್ಲಿ ಈ ರೀತಿಯ ಪ್ರಕರಣ ಅಸಹಜ ಅನಿಸಿದರೂ ಜಪಾನ್‌, ಅಮೆರಿಕದಲ್ಲಿ ಈ ರೀತಿಯ ಪ್ರಕರಣಗಳು ತುಂಬಾ ನಡೆದಿವೆ.

Comments are closed.