ಮನೋರಂಜನೆ

ಅಮಿತಾಭ್‌ಗೆ ಶ್ರೀದೇವಿ ಸಾವಿನ ಮುನ್ಸೂಚನೆ ದೊರೆತಿತ್ತೇ?

Pinterest LinkedIn Tumblr


ಭಾನುವಾರ ಬೆಳಗ್ಗೆ ಎದ್ದ ಲೋಕಕ್ಕೆ ಒಂದು ಶಾಕಿಂಗ್‌ ನ್ಯೂಸ್‌ ಕಾದಿತ್ತು. ದಶಕಗಳ ಮಹಿಳಾ ಸೂಪರ್‌ ಸ್ಟಾರ್‌ ಆಗಿ ಭಾರತೀಯ ಚಿತ್ರ ಮಂದಿರದಲ್ಲಿ ಮಿಂಚುತ್ತಿದ್ದ ಮೋಹಕ ತಾರೆ ಶ್ರೀದೇವಿ ಬಾರದ ಲೋಕಕ್ಕೆ ತೆರಳಿದ್ದರು.

ಶ್ರೀದೇವಿ ಭಾನುವಾರ ಬೆಳಗ್ಗೆ 12.00-1.00 ಗಂಟೆ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

ಆದರೆ ಅವರು ಸಾಯುವ ಸ್ವಲ್ಪ ಮೊದಲು ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್‌ “Na jaane kyun, ek ajeeb si ghabrahat ho rahi hain.”(ಏಕೋ ಗೊತ್ತಿಲ್ಲ, ನನಗೇನೋ ಒಂಥರಾ ಭಯ ಕಾಡುತ್ತಿದೆ) ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು.

ಈ ಇಬ್ಬರು ಸ್ಟಾರ್‌ಗಳು ಜತೆಯಾಗಿ ಇಂಕ್ವಾಲಾಬ್, ಅಖೀರಾ ರಾಸ್ತಾ, ಕುದಾ ಗವಾ ಮುಂತಾದ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು.

ಮನಸ್ಸಿನಲ್ಲಿ ಏಕೋ ಏನೋ ತಳಮಳ ಅನಿಸಿದ್ದಾಗ ಅದನ್ನು ಟ್ವಿಟರ್‌ನಲ್ಲಿ ಹಾಕಿದ್ದರು ಬಿಗ್‌ ಬಿ. ಅದಾಗಿ ಸ್ವಲ್ಪ ಹೊತ್ತಿನಲ್ಲಿ ಶ್ರೀದೇವಿಗೆ ಹೃದಯಾಘಾತವಾದದ್ದು ಕಾಕತಾಳಿಯವೇ ಸರಿ.

Comments are closed.