ಮನೋರಂಜನೆ

ಕಣ್‌ ಸನ್ನೆ ಚೆಲುವೆ ಪ್ರಿಯಾಗೆ ಕಾನೂನು ಜಯ!

Pinterest LinkedIn Tumblr


ಹೊಸದಿಲ್ಲಿ: ಕಣ್‌ಸನ್ನೆಯ ಚೆಲುವೆ, ಮಲಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಸಿಕ್ಕಿದೆ.

ಪ್ರಿಯಾ ಹಾಗೂ “ಒರು ಅಡಾರ್‌ ಲವ್‌’ ಚಿತ್ರತಂಡದ ವಿರುದ್ಧ ಕ್ರಿಮಿನಲ್‌ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ತಂದಿದೆ. ಅಷ್ಟೇ ಅಲ್ಲ, ವೈರಲ್‌ ಆಗಿರುವ ಈ ಸಿನಿಮಾದ ಹಾಡಿಗೆ ಸಂಬಂಧಿಸಿ ಮುಂದೆ ಯಾವುದೇ ಎಫ್ಐಆರ್‌ ಅನ್ನೂ ಯಾವುದೇ ರಾಜ್ಯದಲ್ಲೂ ದಾಖಲಿಸುವಂತಿಲ್ಲ ಎಂಬ ಸ್ಪಷ್ಟ ನಿರ್ದೇಶನವನ್ನೂ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ನೀಡಿದೆ.

ಸಿನಿಮಾದ ಹಾಡಿನಲ್ಲಿ ತಮ್ಮ ಸಮುದಾಯದ ಜನರ ಭಾವನೆಗೆ ಧಕ್ಕೆ ತರುವ ಅಂಶಗಳಿವೆ ಎಂದು ಆರೋಪಿಸಿ ಹೈದರಾಬಾದ್‌ನಲ್ಲಿ ಕೆಲವು ಮುಸ್ಲಿಮರು ಪೊಲೀಸರಿಗೆ ದೂರು ನೀಡಿದ್ದರು. ಮುಂಬಯಿನಲ್ಲೂ ಕ್ರಿಮಿನಲ್‌ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್‌ ವಿಚಾರಣೆಗೆ ತಡೆ ತರುವಂತೆ ಕೋರಿ ಪ್ರಿಯಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

-ಉದಯವಾಣಿ

Comments are closed.