ಅಂತರಾಷ್ಟ್ರೀಯ

ನೋಟು ಅಮಾನ್ಯ, ಜಿಎಸ್‌ಟಿಯಿಂದ ಭಾರತದ ಪ್ರಗತಿ ಕುಂಠಿತ: ಅಮೆರಿಕ

Pinterest LinkedIn Tumblr


ವಾಷಿಂಗ್ಟನ್‌ : ನೋಟು ಅಮಾನ್ಯ ಮತ್ತು ಜಿಎಸ್‌ಟಿ ಅನುಷ್ಠಾನದಿಂದಾಗಿ ಭಾರತದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತೆ ಹೇಳಿದೆ.

ಭಾರತ ಸೇರಿದಂತೆ ನಾಲ್ಕು ಪ್ರಮುಖ ದೇಶಗಳೊಂದಿಗಿನ ಅಮೆರಿಕದ ದ್ವಿಪಕ್ಷೀಯ ವಾಣಿಜ್ಯ ಕೊರತೆ ಹಿಂದಿನ ವರ್ಷದ ಅವಧಿಗೆ ಹೋಲಿಸಿದಾಗ 2017ರ ಮೊದಲ ಮೂರು ತ್ತೈಮಾಸಿಕದಲ್ಲಿ ಹೆಚ್ಚಿದೆ ಎಂದು ವಾಷಿಂಗ್ಟನ್‌ ಹೇಳಿದೆ.

1948ರಿಂದಲೂ ಗ್ಯಾಟ್‌ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಮತ್ತು ಬ್ರಝಿಲ್‌ ಸೇರಿದ ದೇಶಗಳು ತುಂಬಾ ಕಡಿಮೆ ರೀತಿಯಲ್ಲಿ ವಾಣಿಜ್ಯ ಮುಕ್ತವಾಗಿವೆ; ಉನ್ನತ ದರಗಳನ್ನು ಅವು ಕಾಯ್ದಕೊಂಡಿವೆ ಮತ್ತು ಸಾರ್ವತ್ರಿಕ ಬದ್ಧತೆಯನ್ನು ತಪ್ಪಿಸಿಕೊಂಡಿವೆ ಎಂದು ಅಧ್ಯಕ್ಷರ ಆರ್ಥಿಕ ವರದಿಯಲ್ಲಿ ಹೇಳಲಾಗಿದೆ. ಈ ವರದಿಯಲ್ಲಿ ಅಮೆರಿಕ ಆರ್ಥಿಕತೆಯ ಭವಿಷ್ಯ ಅತ್ಯುಜ್ವಲವಾಗಿರುವುದನ್ನು ಅತ್ಯಾಕರ್ಷಕವಾಗಿ ಚಿತ್ರಿಸಲಾಗಿದೆ.

ಭಾರತದಲ್ಲಿ ಶೇ.90ರಷ್ಟು ವ್ಯಾಪಾರ ವಹಿವಾಟುಗಳು ನಗದಿನಲ್ಲಿ ನಡೆಯುತ್ತವೆ. 2016ರ ನವೆಂಬರ್‌ನಲ್ಲಿ ಭಾರತ ಸರಕಾರ ಕೈಗೊಂಡ 500 ಮತ್ತು 1,000 ರೂ. ನೋಟುಗಳ ಅಪನಗದೀಕರಣದಿಂದ ಶೇ.86ರಷ್ಟು ನಗದು ಚಲಾವಣೆಯಿಂದ ಅಮಾನ್ಯಗೊಂಡವು; ಇದರಿಂದಾಗಿ ದೇಶದ ಆರ್ಥಿಕತೆಗೆ ತೀವ್ರವಾದ ಹೊಡೆತ ಬಿತ್ತು. ಅನಂತರದಲ್ಲಿ ಜಾರಿಯಾದ ಜಿಎಸ್‌ಟಿಯಿಂದಾಗಿಯೂ ಆರ್ಥಿಕ ಪ್ರಗತಿ ಕುಂಠಿತಗೊಂಡಿತು ಎಂದು ಅಮೆರಿಕ ಅಧ್ಯಕ್ಷರ ಆರ್ಥಿಕ ವರದಿ ಹೇಳಿದೆ.

-ಉದಯವಾಣಿ

Comments are closed.