ರಾಷ್ಟ್ರೀಯ

ಮೊಬೈಲ್‌ ನಂಬರ್‌ಗೆ 13 ಅಂಕಿ ನಿಯಮ ಅನ್ವಯಿಸಲ್ಲ

Pinterest LinkedIn Tumblr


ಹೊಸದಿಲ್ಲಿ: ಮೊಬೈಲ್‌ ಸಂಖ್ಯೆಗಳು ಇನ್ನು 10ರ ಬದಲಿಗೆ 13 ಅಂಕಿ ಹೊಂದಿ ರುತ್ತವೆ ಎಂದು ಹಬ್ಬಿದ್ದ ಸುದ್ದಿಯನ್ನು ಟೆಲಿಕಾಂ ಕಂಪೆನಿಗಳು ಅಲ್ಲಗಳೆದಿವೆ. ಆದರೆ ಮಶಿನ್‌ ಟು ಮಶಿನ್‌ ಸಿಮ್‌ನ ಸಂಖ್ಯೆಗಳು 10 ಅಂಕಿ ಬದಲಿಗೆ 13 ಅಂಕಿ ಹೊಂದಿರುತ್ತವೆ. ಈ ಬಗ್ಗೆ ದೂರಸಂ ಪರ್ಕ ನಿಯಂತ್ರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.

ಅಂದರೆ ಕ್ರೆಡಿಟ್‌ ಕಾರ್ಡ್‌ ಪಾವತಿಗೆ ಬಳಸುವ ಪಿಒಎಸ್‌ ಮಶಿನ್‌ಗಳು, ಇತರ ಇಂಟರ್ನೆಟ್‌ ಆಫ್ ದಿ ಥಿಂಗ್ಸ್‌ ಸಾಧನಗಳಿಗೆ ಬಳಸಲಾಗುವ ಸಿಮ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಈಗಾಗಲೇ ಒದಗಿಸಲಾಗಿರುವ 10 ಅಂಕಿಗಳ ಸಾಧನಗಳನ್ನು 13 ಅಂಕಿಗಳ ನ್ನಾಗಿ ಬದಲಿಸುವ ಪ್ರಕ್ರಿಯೆ ಅ. 1 ರಿಂದ ಆರಂಭಿಸಿ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಬೇಕು. ಜುಲೈ 1 ರಿಂದ ವಿತರಿಸುವ ಎಲ್ಲ ಹೊಸ ಸಿಮ್‌ಗಳೂ 13 ಅಂಕಿ ಹೊಂದಿರಬೇಕು ಎಂದು ಟ್ರಾಯ್‌ ಅದೇಶಿಸಿದೆ. ಆದರೆ, ಸದ್ಯಕ್ಕೆ ಬಳಕೆಯಲ್ಲಿರುವ ಮೊಬೈಲ್‌ ಸಂಖ್ಯೆಗಳು 10 ಅಂಕಿಯಲ್ಲೇ ಮುಂದುವರಿಯುತ್ತವೆ.

-ಉದಯವಾಣಿ

Comments are closed.