ರಾಷ್ಟ್ರೀಯ

1 ಮತದಿಂದ ಗೆದ್ದಿದ್ದ ಬಿಜೆಪಿ ಶಾಸಕ ಅನಾರೋಗ್ಯದಿಂದ ನಿಧನ

Pinterest LinkedIn Tumblr


ಜೈಪುರ: 2008ರ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದು ದಾಖಲೆ ಮಾಡಿದ್ದ ರಾಜಸ್ಥಾನದ ಹಾಲಿ ಬಿಜೆಪಿ ಶಾಸಕ ಕಲ್ಯಾಣ್‌ ಸಿಂಗ್‌ ಚೌಹಾನ್‌ ಸುದೀರ್ಘ ಅನಾರೋಗ್ಯದಿಂದ ಬುಧವಾರ ಮೃತಪಟ್ಟರು.

ಪ್ರಸಕ್ತ ನಾಥದ್ವಾರ ಕ್ಷೇತ್ರದ ಶಾಸಕರಾಗಿದ್ದ ಅವರು 2008ರಲ್ಲಿ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಿ.ಪಿ.ಜೋಷಿ ಅವರ ವಿರುದ್ಧ ಒಂದು ಮತದ ಗೆಲುವಿನ ಮೂಲಕ ಸುದ್ದಿಯಾಗಿದ್ದರು. ವಿಶೇಷವೆಂದರೆ, ಆಗ ಕಾಂಗ್ರೆಸ್‌ ಗೆಲುವು ಸಾಧಿಸಿ ಅಧಿಕಾರ ಹಿಡಿದಿತ್ತು. ರಾಜ್ಯಾಧ್ಯಕ್ಷರೇ ಸೋತಿದ್ದರು!

Comments are closed.