ರಾಷ್ಟ್ರೀಯ

ಮದುವೆಯಾದ ದಿನವೇ ಮಗುವಿಗೆ ಜನ್ಮ ನೀಡಿದಳು!

Pinterest LinkedIn Tumblr


ಉನ್ನಾವು, (ಉ.ಪ್ರ.):: ವಿವಾಹವಾದ ಒಂಬತ್ತು ತಿಂಗಳ ಬಳಿಕ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಸಂಗತಿ. ಆದರೆ, ಇಲ್ಲೊಬ್ಬ ವಧು ವಿವಾಹವಾದ ದಿನವೇ ತಾಯಿಯಾಗುವ ಮೂಲಕ ವರನ ಕುಟುಂಬಕ್ಕೆ ಆಘಾತ ನೀಡಿದ್ದಾಳೆ.

ಹೌದು, ಇಂತದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಉನ್ನೋ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ಕೋಪಗೊಂಡ ಪತಿರಾಯ ಪತ್ನಿಯ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಧುವನ್ನು ತವರು ಮನೆಗೆ ಅಟ್ಟಲು ನಿರ್ಧರಿಸಿದ್ದಾರೆ.

ಕೊತ್ವಾಲಿ ಪ್ರದೇಶದ ಸಖನ್ ಮುಸಲ್ಮಾನನ್ ಪ್ರದೇಶದಲ್ಲಿ ಈ ಪ್ರಸಂಗ ನಡೆದಿದೆ. ಫೆಬ್ರವರಿ 20 ರಂದು ವರನ ಕಡೆಯ ದಿಬ್ಬಣ ವಧುವಿನ ಊರಾದ ಜಾರ್ಗಾಂವ್‌ಗೆ ತೆರಳಿತ್ತು. ಎಲ್ಲ ಸಂಪ್ರದಾಯ, ಆಚರಣೆಗಳನ್ನು ಪೂರೈಸಿದ ಬಳಿಕ ವಧು ಪತಿಯ ಮನೆಗೆ ಬಂದಿದ್ದಾಳೆ. ಈ ವೇಳೆ ಹಠಾತ್ ಅನಾರೋಗ್ಯಕ್ಕೊಳಗಾದ ವಧುವನ್ನು ಪರಿಶೀಲಿಸಿದಾಗ ಆಘಾತವೇ ಕಾದಿದ್ದು, ನವವಿವಾಹಿತೆ ಕೆಲವೇ ಸಮಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಪತ್ನಿ ಹಾಗೂ ಆಕೆಯ ತಂದೆ ಮೋಸ ಮಾಡಿದ್ದಾರೆ ಎಂದು ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ವಧುವಿನ ತಂದೆಯು ಎಲ್ಲಾ ಕಥೆಯನ್ನು ಹೇಳಿದ ಬಳಿಕವೇ ವರನು ವಿವಾಹಕ್ಕೆ ಸಮ್ಮತಿಸಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

Comments are closed.