ಕನ್ನಡ ಚಿತ್ರರಂಗದ ಅತೀ ಶ್ರೇಷ್ಠವಾದ ನಟರಲ್ಲಿ ಒಬ್ಬರಾದ, ಎವರ್ ಗ್ರೀನ್ ನಟ ಅನಂತ್ ನಾಗ್ ಹಾಗು ನಟಿ ಗಾಯತ್ರಿ ಅವರ ಪುತ್ರಿ. ಈಕೆಯ ಹೆಸರು ಅದಿತಿ. ಚಿತ್ರರಂಗದ ಬಗ್ಗೆ, ನಟನೆ, ಡ್ಯಾನ್ಸ್ ಎಲ್ಲವೂ ಗೊತ್ತಿರುವ ಜೊತೆಗೆ ಅತಿ ರೂಪವತಿ ಕೂಡ ಈಕೆ. ಆದರೆ ಸಿನೆಮಾದಿಂದ ಬಲು ದೂರವಿರುವ ಅದಿತಿ ಪುತ್ತೂರು ವಿಟ್ಲ ಸಮೀಪದ ವಿವೇಕ್ ಶೆಟ್ಟಿ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ.