ಮನೋರಂಜನೆ

‘ನನಗೆ ಸೆಕ್ಸ್’ಗೆ ಹುಡುಗಿ ಬೇಕು’ ಎಂದು ನಟಿ ದೀಪ್ತಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿ !

Pinterest LinkedIn Tumblr

ಬೆಂಗಳೂರು: ನಟಿ ದೀಪ್ತಿ ಕಾಪ್ಸೆ ಅವರು ತಮಗೆ ವ್ಯಕ್ತಿಯೊಬ್ಬ ವಾಟ್ಸ್‌ ಆ್ಯಪ್‌ ಮೂಲಕ ಅಶ್ಲೀಲ ಸಂದೇಶ ರವಾನಿಸಿದ ವಿಚಾರವನ್ನು ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದಾರೆ.

ತನ್ನನ್ನು ‘ಇಂಜು’ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ದೀಪ್ತಿ ಅವರ ವಾಟ್ಸ್‌ ಆ್ಯಪ್‌ಗೆ ಸಂದೇಶ ಕಳುಹಿಸಿದ್ದಾನೆ. ‘ನನಗೆ ಲೈಂಗಿಕ ಸಂಪರ್ಕಕ್ಕೆ ಬೆಂಗಳೂರಿನಲ್ಲಿ ಯಾರಾದರೂ ಬೇಕು. 20ರಿಂದ 35 ವರ್ಷದೊಳಗಿನ ಮಾದಕ ಹುಡುಗಿಯರು ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಹಣ ಪಡೆಯುವವರು ಅಥವಾ ಹಣ ಪಡೆಯದೇ ಬರುವವರು ಆಗಬಹುದು’ ಎಂಬ ಅರ್ಥ ಬರುವ ಸಂದೇಶವನ್ನು ಈ ವ್ಯಕ್ತಿ ಕಳುಹಿಸಿದ್ದಾನೆ.

ಇದಕ್ಕೆ ದೀಪ್ತಿ ಅವರು ವಾಟ್ಸ್‌ಆ್ಯಪ್‌ ಮೂಲಕವೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನೀನು ಕಳುಹಿಸಿರುವ ಈ ಸಂದೇಶವನ್ನು ನಾನು ಖಂಡಿತವಾಗಿಯೂ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಳ್ಳುತ್ತೇನೆ. ಯಾರೂ ನಿನ್ನನ್ನು ಸಂಪರ್ಕಿಸದೆ ಇದ್ದರೆ, ನಿನ್ನ ತಾಯಿ ಅಥವಾ ಸಹೋದರಿಯರ ಬಳಿ ಹೋಗು. ಅವರು ನಿನ್ನ ಜೊತೆ ಉಚಿತವಾಗಿ ಮಲಗಬಹುದು. ನಿನ್ನ ಹಣ ಉಳಿಯುತ್ತದೆ. ಧನ್ಯವಾದಗಳು’ ಎಂದು ದೀಪ್ತಿ ಉತ್ತರಿಸಿದ್ದಾರೆ.

ಇದಾದ ತಕ್ಷಣ ದೀಪ್ತಿ ಅವರಿಗೆ ಸಂದೇಶ ಕಳುಹಿಸಿರುವ ‘ಇಂಜು’, ‘ಕ್ಷಮಿಸಿ, ನನ್ನ ಖಾತೆ ದುರ್ಬಳಕೆಯಾಗಿದೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ, ಕಿರಿಕಿರಿ ಉಂಟು ಮಾಡಿದ್ದಕ್ಕೆ ಕ್ಷಮಿಸಿ’ ಎಂದು ಹೇಳಿದ್ದಾನೆ. ವಾಟ್ಸ್‌ಆ್ಯಪ್‌ ಸಂದೇಶದ ಸ್ಕ್ರೀನ್‌ಶಾಟ್‌ ಅನ್ನು ಫೇಸ್‌ಬುಕ್‌ ಮೂಲಕ ಹಂಚಿಕೊಂಡಿರುವುದು ತಾವೇ ಎಂಬುದನ್ನು ದೀಪ್ತಿ ಖಚಿತಪಡಿಸಿದ್ದಾರೆ. ದೀಪ್ತಿ, ಹನಿ ಹನಿ ಇಬ್ಬನಿ ಚಿತ್ರದಲ್ಲಿ ನಟಿಸಿದ್ದರು.

Comments are closed.