ರಾಷ್ಟ್ರೀಯ

ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ವಿವಾಹಿತ ಮಹಿಳೆ!

Pinterest LinkedIn Tumblr

ಕೊರ್ಬಾ(ಛತ್ತೀಸ್ ಘಡ): ಇದಕ್ಕೆ ಭಕ್ತಿಯ ಪರಾಕಾಷ್ಠೆ ಎಂದು ಹೇಳಬಹುದೆನೋ. 28 ವರ್ಷದ ವಿವಾಹಿತ ಮಹಿಳೆಯೊರ್ವಳು ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾಳೆ.

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ನುನೆರಾ ಗ್ರಾಮದಲ್ಲಿರುವ ಶಿವ ದೇವಾಲಯದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫರ್ತು ರಾಮ್ ಗೊಂಡ್ ಎಂಬುವರ ಪತ್ನಿ ಸೀಮಾ ಬಾಯ್ ಗೊಂಡ್ ಬೆಳಗ್ಗೆ ಪ್ರಾರ್ಥನೆ ಅರ್ಪಿಸಿದ ಬಳಿಕ ಶಿವಲಿಂಗದ ಮುಂದೆ ಚಾಕುವಿನಿಂದ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ.

ದೇವಸ್ಥಾನದಲ್ಲಿ ರಕ್ತ ಸ್ರಾವವಾಗಿರುವುದನ್ನು ಕಂಡ ಗ್ರಾಮಸ್ಥರು ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Comments are closed.