ಮನೋರಂಜನೆ

ನ್ಯಾಷನಲ್ ಕ್ರಶ್ ನಟಿ ಪ್ರಿಯಾ ವಿರುದ್ಧವೇ ದೂರು ದಾಖಲು!

Pinterest LinkedIn Tumblr


ಹೈದರಾಬಾದ್​: ನ್ಯಾಷನಲ್ ಕ್ರಶ್ ಸೃಷ್ಟಿಸಿ ಯುವಕರು ಸೇರಿ ಎಲ್ಲ ವಯೋಮಾನದವರ ಹೃದಯ ಕದ್ದಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್​ಗೆ ಈಗ ಸ್ವತಃ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮುಸ್ಲಿಂ ಭಾವನೆಗಳಿಗೆ ಧಕ್ಕೆ ಆರೋಪದಡಿ ಮೊಹಮ್ಮದ್ ಅಬ್ದುಲ್ಲಾ ಎಂಬುವವರು ಕೇರಳದ ಹುಬ್ಬೇರಿಸೋ ಹುಡುಗಿ ಪ್ರಿಯಾ ವಿರುದ್ಧ ಹೈದರಾಬಾದ್​ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

‘ಒರು ಅಡರ್ ಲವ್ ’ ಚಿತ್ರದ ಲವ್ ಸಾಂಗ್​ನಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮೊಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ.

ಗೀತೆ ಕೇಳಿದಾಗ ಮುಸ್ಲಿಂ ಸಮುದಾಯಕ್ಕೆ ಧಕ್ಕೆಯನ್ನುಂಟು ಮಾಡಿರುವ ಸಾಹಿತ್ಯ ಕಂಡು ಬಂತು. ಕೇವಲ ಹೈದ್ರಾಬಾದ್​ನಲ್ಲಿ ಮಾತ್ರ ಕೇಸ್ ದಾಖಲಿಸಿಲ್ಲ. ಕೇರಳದ ಕಮಿಷನರ್​ಗೂ ದೂರು ನೀಡಿದ್ದೇವೆ ಎಂದು ಇನ್ನೊಬ್ಬ ದೂರುದಾರ ಜಾಹೀರ್ ಅಲಿ ಖಾನ್ ಹೇಳಿದ್ದಾರೆ.

ಗೀತೆಯ ಎಲ್ಲ ಟ್ರಾನ್ಸ್ಲೇಷನ್ ಹಾಗೂ ವಿಡಿಯೋ ಕ್ಲಿಪ್ ಅ​ನ್ನು ಕೂಡ ಕಳಿಸಿದ್ದೇವೆ. ಹಾಡಿನ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

Comments are closed.