ಮನೋರಂಜನೆ

ಪದ್ಮಾವತ್‌: ಕೇವಲ 11 ದಿನದಲ್ಲಿ 212 ಕೋಟಿ ರೂ. ಗಳಿಕೆ

Pinterest LinkedIn Tumblr


ಹೊಸದಿಲ್ಲಿ: ಬಾಲಿವುಡ್‌ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಚಿತ್ರ “ಪದ್ಮಾವತ್‌’ ಬಾಕ್ಸ್‌ ಆಫೀಸ್‌ನಲ್ಲಿ ಅತ್ಯದ್ಭುತ ಸಾಧನೆ ಮಾಡುತ್ತಿದೆ. ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಈ ಕಲಾತ್ಮಕ ಚಿತ್ರ 212 ಕೋಟಿ ರೂ. ಗಳಿಕೆಯನ್ನು ದಾಖಲಿಸಿದೆ.

ತೆರೆ ಕಂಡ ಮೊದಲ ವಾರಾಂತ್ಯ ಪದ್ಮಾವತ್‌ ಚಿತ್ರ 166 ಕೋಟಿ ರೂ. ಗಳಿಸಿತ್ತು. ಅನಂತರದಲ್ಲಿ ಎರಡನೇ ವಾರದಲ್ಲೀಗ ಮತ್ತೆ 46 ಕೋಟಿ ರೂ. ಗಳಿಸಿದೆ. ಪದ್ಮಾವತ್‌ ಚಿತ್ರ ವಿವಾದದ ದೆಸೆಯಿಂದಾಗಿ ಇನ್ನೂ ಕೆಲವು ರಾಜ್ಯಗಳಲ್ಲಿ ಬಿಡುಗಡೆಯಾಗಿಲ್ಲ; ಹಾಗಿದ್ದರೂ ಅದು ಕೇವಲ 11 ದಿನಗಳಲ್ಲಿ 212 ಕೋಟಿ ಸಂಪಾದಿಸಿರುವುದು ಒಂದು ಅದ್ಭುತ ಸಾಧನೆಯೇ ಸರಿ ಎಂದು ಬಾಲಿವುಡ್‌ ಚಿತ್ರೋದ್ಯಮ ವಿಶ್ಲೇಷ ತರಣ್‌ ಆದರ್ಶ್‌ ಹೇಳಿದ್ದಾರೆ.

ಕಳೆದ ಜನವರಿ 25ರಂದು ತೆರೆಕಂಡಿದ್ದ ಪದ್ಮಾವತ್‌ ಚಿತ್ರವು ವಿದೇಶಗಳಲ್ಲಿ ಕೂಡ ಭಾರೀ ಜನಪ್ರಿಯವಾಗಿ ಉತ್ತಮ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ದಾಖಲಿಸುತ್ತಿದೆ. ಚಿತ್ರದ ಪ್ರಧಾನ ಭೂಮಿಕೆಯಲ್ಲಿ ದೀಪಿಕಾ ಪಡುಕೋಣೆ, ಶಾಹೀದ್‌ ಕಪೂರ್‌, ರಣವೀರ್‌ ಸಿಂಗ್‌ ಇದ್ದಾರೆ.

-ಉದಯವಾಣಿ

Comments are closed.