ಮನೋರಂಜನೆ

ಮತ್ತೆ ಸುದ್ದಿಯಲ್ಲಿದ್ದಾರೆ ‘ಬಿಗ್ ಬಾಸ್’ ಚಂದನ್ ಶೆಟ್ಟಿ.! ಮತ್ತೊಂದು ರಿಯಾಲಿಟಿ ಶೋನಲ್ಲಿ ಅವಕಾಶ

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಆಗಿರುವ ಚಂದನ್ ಶೆಟ್ಟಿ ಸ್ಟಾರ್ ಆಗುತ್ತಿದ್ದಂತೆ ಅವರನ್ನು ಅದೃಷ್ಟ ಈಗ ಹುಡುಕಿಕೊಂಡು ಬರುತ್ತಿದೆಯಂತೆ !

ಪ್ರತಿ ದಿನ ಒಂದಲ್ಲ ಒಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುವ ಚಂದನ್ ಶೆಟ್ಟಿ ಈಗ ಬಿಗ್ ಬಾಸ್ ಬಳಿಕ ಮತ್ತೊಂದು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಕಲರ್ಸ್ ಸೂಪರ್ ನಲ್ಲಿ ಶುರು ಆಗಲಿರುವ ‘ಮಜಾ ಟಾಕೀಸ್’ ಸೂಪರ್ ಸೀಸನ್ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದರ ಜೊತೆಗೆ ಕಲರ್ಸ್ ವಾಹಿನಿಯಲ್ಲಿ ಶುರು ಆಗಲಿರುವ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿರಲಿದ್ದಾರಂತೆ ಚಂದನ್ ಶೆಟ್ಟಿ.

ಈಗಾಗಲೇ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ‘ನಾಟ್ಯ’ ಮಯೂರಿ ಹಾಗೂ ನಟಿ ಶ್ರುತಿ ಹರಿಹರನ್ ತೀರ್ಪುಗಾರರ ಸ್ಥಾನ ಅಲಂಕರಿಸುವ ಜೊತೆಗೆ ಚಂದನ್ ಶೆಟ್ಟಿ ಕೂಡ ಸಾಥ್ ಕೊಡ್ತಾರೆ ಎಂದು ಕಲರ್ಸ್ ವಾಹಿನಿಯ ಮೂಲಗಳು ಬಹಿರಂಗಪಡಿಸಿವೆ.

‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಈಗಾಗಲೇ ಬಿಗ್ ಬಾಸ್ ಕನ್ನಡ-2′ ವಿಜೇತ ಅಕುಲ್ ಬಾಲಾಜಿ ನಿರೂಪಣೆ ಇರಲಿದ್ದು, ಮತ್ತೊಂದೆಡೆ ‘ಬಿಗ್ ಬಾಸ್ ಕನ್ನಡ-5’ ವಿನ್ನರ್ ಚಂದನ್ ಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸವನ್ನು ತಂದಿದೆ..

Comments are closed.