ಮನೋರಂಜನೆ

ಬಿಗ್‌ಬಾಸ್‌ ಮನೆಯ ಕೊನೆಯ ಗಳಿಗೆಯಲ್ಲಿ ಕಣ್ಣೀರು ಹಾಕಿದ ನಿವೇದಿತಾ ! ಅಷ್ಟಕ್ಕೂ ದಿವಾಕರ್ ಮಾಡಿದ್ದೇನು..?

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್ ಫಿನಾಲೆಗೆ ಮೂರು ದಿನ ಬಾಕಿಯಿದ್ದು, ಮನೆಯಲ್ಲಿರುವ ಐದು ಮಂದಿಯಲ್ಲಿ ಪ್ರಬಲ ಸ್ಪರ್ಧಿ ಎಂದೇ ಬಿಂಬಿತವಾಗಿರುವ ಬಾರ್ಬಿ ಡಾಲ್ ನೀವೆದಿತಾ ಗೌಡ ಕಣ್ಣೀರು ಹಾಕಿದ ಘಟನೆ ನಡೆಯಿತು.

ನಿವೇದಿತಾ ಕಣ್ಣೀರು ಹಾಕಲು ಕಾರಣ ದಿವಾಕರ್. ನಿವೇದಿತಾಳನ್ನು ಬಿಗ್‌ಬಾಸ್ ಆರಂಭದಿಂದಲೂ ಕೆಣಕುತ್ತಲೇ ಬಂದಿರುವ ದಿವಾಕರ್ ನಿನ್ನೆ ಕೋಪಗೊಂಡರು.

ಬಿಗ್‌ಬಾಸ್‌ ಮನೆಯಲ್ಲಿ ಪ್ರತಿದಿನ ಕೇಳಿಸಲಾಗುವ ವೇಕ್‌ಅಪ್ ಸಾಂಗ್ ವಿಚಾರವಾಗಿ ದಿವಾಕರ್ ಹಾಗೂ ನಿವೇದಿತಾ ನಡುವೆ ಮಾತಿಗೆ ಮಾತು ಬೆಳೆಯಿತು. ಬಾಕಿಯಿರುವ ಮೂರು ದಿನಗಳ ಮುಂಜಾನೆ ಯಾವ ಸಾಂಗ್ ಕೇಳಿಸಬೇಕು ಎನ್ನುವ ಅಭಿಪ್ರಾಯ ತಿಳಿಸಲು ಸ್ಪರ್ಧಿಗಳಿಗೆ ತಿಳಿಸಲಾಗಿತ್ತು. ಈ ವೇಳೆ ನಿವೇದಿತಾ ಮೆಲೋಡಿ ಸಾಂಗ್‌ಗೆ ಒತ್ತಾಯಿಸಿದ್ರೆ, ದಿವಾಕರ್ ಬೇರೆ ಸಾಂಗ್ ಕೇಳಿಸುವಂತೆ ಮನವಿ ಮಾಡಿಕೊಂಡರು. ಈ ವೇಳೆ ಉಂಟಾದ ಸಣ್ಣ ಮಾತಿನ ಸಂಘರ್ಷದಿಂದ ಬಾರ್ಬಿ ಡಾಲ್ ಕಣ್ಣೀರು ಹಾಕುವಂತಾಯಿತು.

ನಿವೇದಿತಾ ಹಾಗು ದಿವಾಕರ್ ಮಧ್ಯೆ ಮಾತಿಗೆ ಮಾತು ಬೆಳೆಯಿತು. ನೀನು ಸಣ್ಣ ಮಗುವಿನಂತೆ ಮಾಡುತ್ತಿ…ಮೆಂಟಲ್ ನೀನು ಎಂದು ದಿವಾಕರ್ ಮನಬಂದಂತೆ ನಿವೇದಿತಾಳಿಗೆ ಬೈದರು. ಇದರಿನ ನೊಂದ ನಿವೇದಿತಾ ಕಣ್ಣೇರು ಹಾಕುತ್ತ ಬಾತ್‌ರೂಮ್‌ಗೆ ತೆರಳಿದಳು.

ಅಲ್ಲಿ ಬಾಗಿಲು ಮುಚ್ಚಿಕೊಂಡು ಅಳಲು ಪ್ರಾರಂಭಿಸಿ ನಿವೇದಿತಾಳನ್ನು ಬಳಿಕ ಚಂದನ್ ಸಮಾಧಾನ ಪಡಿಸಿದರು.

Comments are closed.