ಮನೋರಂಜನೆ

ಸುಚಿಲೀಕ್ಸ್ ಮತ್ತೆ ಆರಂಭ, ಈ ಬಾರಿ ಯಾರಿಗೆ ಕಾದಿದೆಯೋ?

Pinterest LinkedIn Tumblr


ಇಷ್ಟು ದಿನಗಳ ಕಾಲ ಸದ್ದಿಲ್ಲದಂತ್ತಿದ್ದ ಸುಚಿಲೀಕ್ಸ್ ಈಗ ಮತ್ತೆ ಆರಂಭವಾಗಿದೆ. ಈ ಹಿಂದೆ ದಕ್ಷಿಣದ ಹಲವಾರು ತಾರೆಗಳ ಖಾಸಗಿ ವ್ಯವಹಾರಗಳನ್ನು ಬಹಿರಂಗಪಡಿಸುವ ಮೂಲಕ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ‘ತಾನು ಹೇಗೆ ಹೊರಗೆ ಹೋದೆನೋ ಅದೇ ರೀತಿ ವಾಪಸ್ ಆಗಿದ್ದೇನೆ. ಈ ಬಾರಿಯೂ ಹಲವು ತಾರೆಗಳ ಗುಟ್ಟು ರಟ್ಟು ಮಾಡುತ್ತೀನಿ’ ಎಂಬ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ ಸುಚಿತ್ರಾ.

ಇದೀಗ ಆ ವೀಡಿಯೋ ಕಾಲಿವುಡ್‍ನಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಸುಚಿಲೀಕ್ಸ್ ತಮಿಳು ಚಿತ್ರೋದ್ಯಮಕ್ಕೆ ಸಂಬಂಧಿಸಿದ ಹಲವು ತಾರೆಗಳಿಗೆ ನಿದ್ದೆ ಇಲ್ಲದಂತೆ ಮಾಡಿತ್ತು. ಗಾಯಕಿ ಸುಚಿತ್ರಾ ಟ್ವಿಟ್ಟರ್ ಖಾತೆಯಲ್ಲಿ ಹಲವು ಸೆಲೆಬ್ರಿಟಿಗಳ ರಾಸಲೀಲೆಗಳ ವೀಡಿಯೋ ಪ್ರತ್ಯಕ್ಷವಾಗಿತ್ತು, ಇವು ಭಾರಿ ಚರ್ಚೆಗೆ ಗ್ರಾಸವಾಗಿದ್ದವು.

ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ್ದಾರೆಂದು, ಬೇಕೆಂದೇ ಈ ರೀತಿ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ಲೀಕೇಜ್‍ಗೆ ಜವಾಬ್ದಾರಿ ಯಾರು ಎಂಬ ಬಗ್ಗೆ ಸ್ಪಷ್ಟನೆ ಕೊಡದಿದ್ದರೂ ಕೆಲವರು ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಮಲಯಾಳಿ ನಟಿ ಅಮಲಾಪೌಲ್ ಈ ಸೂಕ್ಷ್ಮ ವಿಚಾರದ ಬಗ್ಗೆ ತಮಾಷೆ ಮಾಡಿದ್ದರು. ತನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ್ದಾರೆಂದು, ಆ ಟ್ವೀಟ್‌ಗೂ ತನಗೂ ಸಂಬಂಧ ಇಲ್ಲ ಎಂದು ಸುಚಿತ್ರಾ ಪೊಲೀಸರಿಗೆ ದೂರು ನೀಡಿದ್ದರು. ಈಗ ಮತ್ತೆ ತಾನು ಬಂದಿದ್ದೀನಿ ಎಂದು ಅವರು ಹೇಳಿರುವುದು ಗಮನಾರ್ಹ.

Comments are closed.