
ಬೆಂಗಳೂರು: ಬಿಗ್‌ಬಾಸ್ ಕನ್ನಡ 5ನೇ ಆವೃತ್ತಿಯು ಇನ್ನೇನು ಮುಗಿಯುವ ಹಂತಕ್ಕೆ ಕಾಲಿಟ್ಟಿದ್ದು, ಮನೆಯಲ್ಲಿ ಇಲ್ಲಿವರೆಗೆ ನಡೆಯುತ್ತಿದ್ದ ಪ್ರೇಮ ಕಹಾನಿಗಳು ಕೇವಲ ಗಿಮಿಕೇ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಆದರೆ …..
ಬಿಗ್‌ಬಾಸ್ ಆರಂಭದಿಂದಲೂ ಮನೆಯಲ್ಲಿ ಸದ್ದು ಮಾಡಿದ್ದು, ಜೆಕೆ-ಶ್ರುತಿ, ಜಗನ್-ಆಶಿತಾ, ಚಂದನ್-ಶ್ರುತಿ ಜೋಡಿ. ಪ್ರತಿ ಶನಿವಾರ ಪಂಚಾಯತಿ ಮಾಡಲು ಬರುತ್ತಿದ್ದ ಸುದೀಪ್ ಈ ಬಗ್ಗೆ ಎತ್ತಿದ ಪ್ರಶ್ನೆಗಳೇ ಹೆಚ್ಚು.
ಜಗನ್-ಆಶಿತಾ ಬಿಗ್‌ಬಾಸ್ ಮನೆಯಲ್ಲಿದ್ದಷ್ಟು ದಿನ ಒಬ್ಬರನ್ನೊಬ್ಬರು ಬಿಟ್ಟಿರಲಿಲ್ಲ. ಹೊರಬಿದ್ದ ಮೇಲೆ ಅವರ ಪ್ರೇಮ ಕಹಾನಿ ಏನಾಯಿತು ಗೊತ್ತಿಲ್ಲ. ಅದರ ನಂತರ ಜೆಕೆ-ಶ್ರುತಿ ಮಧ್ಯೆ ನಡೆಯುತ್ತಿದ್ದ ಪ್ರೇಮ ಪುರಾಣ ಮುಂದುವರಿಯುತ್ತಿದ್ದಂತೆ, ಮಧ್ಯೆ ಪ್ರವೇಶಿಸಿದ ಚಂದನ್, ತಾನು ಕೂಡ ಶ್ರುತಿಯನ್ನು ಪ್ರೀತಿಸುತ್ತಿದ್ದೇನೆ. ಆಕೆ ತನಗಿಷ್ಟ ಅಂತ ಹೇಳಿಕೊಂಡು ತಿರುಗುತ್ತಿದ್ದ.
ಶ್ರುತಿ ತನಗೆ ಚಂದನ್ ಮೇಲೆ ಯಾವುದೇ ರೀತಿಯ ಮನಸ್ಸು ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಚಂದನ್ ಮಾತ್ರ ಶ್ರುತಿ ಹಿಂದೆ ಸುತ್ತುವುದನ್ನು ಬಿಟ್ಟಿರಲಿಲ್ಲ.
ಇದೆಲ್ಲವೂ ಕೇವಲ ಬಿಗ್‌ಬಾಸ್ ವೀಕ್ಷಕರನ್ನು ಕೇಂದ್ರೀಕರಿಸಲು ಮಾಡುತ್ತಿರುವ ಗಿಮಿಕ್ ಎಂದೇ ಹೇಳಲಾಗುತ್ತಿದ್ದರೂ, ಬಿಗ್‌ಬಾಸ್ ಕೊನೆಯ ಹಂತದವರೆಗೆ ಜೆಕೆ-ಶ್ರುತಿ-ಚಂದನ್ ಅವರ ತ್ರಿಕೋನ ಪ್ರೇಮಕಹಾನಿ ಸಾಗಿದ್ದು, ಚಂದನ್ ತಂದೆ ಮನೆಗೆ ಎಂಟ್ರಿ ನೀಡಿದ್ದ ವೇಳೆ ಹೊರಗೆ ಬಂದ ಮೇಲೆ ಹುಡುಗಿ ನೋಡಿ ಮಾಡುವೆ ಮಾಡುವ ಪ್ರಸ್ತಾಪವನ್ನು ಮಾಡಿದ್ದರು.
ಸೋಮವಾರ ಬಿಗ್‌ಬಾಸ್ ಮನೆಗೆ ಕಲರ್ಸ್ ಸೂಪರ್’ನಲ್ಲಿ ಫೆಬ್ರವರಿ 8 ರಿಂದ ಪ್ರಸಾರವಾಗಲಿರುವ ಮಜಾ ಟಾಕೀಸ್ ತಂಡ ಭೇಟಿನೀಡಿತ್ತು. ಈ ವೇಳೆ ಶ್ವೇತ ಚಂಗಪ್ಪ ಅವರು ಚಂದನ್ ಜೊತೆ ಬಿಗ್ ಬಾಸಿನ ಪ್ರೇಮ ಕಹಾನಿ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ನಡೆಯುತ್ತಿರುವ ಪ್ರೇಮ ಕಹಾನಿ ಕೇವಲ ಟೈಂಪಾಸಿಗಷ್ಟೇ…ಸೀರಿಯಸ್ ಅಲ್ಲ. ನಾನು ಹೊರಗೆ ಹೋದ ಮೇಲೆ ಒಳ್ಳೆಯ ಹುಡುಗಿ ನೋಡಿ ಮದುವೆಯಾಗಿತ್ತೇನೆ ಎಂದು ಹೇಳಿದರು. ಚಂದನ್ ಅವರು ಶ್ವೇತ ಜೊತೆ ಮಾತನಾಡಿದ್ದನ್ನು ನೋಡಿದರೆ ಬಿಗ್‌ಬಾಸ್ ಮನೆಯ ಪ್ರೇಮ ಕಹಾನಿ ಸೀರಿಯಸ್ ಅಲ್ಲ. ಅದು ಕೆಲವ ಬಿಗ್‌ಬಾಸ್ ವೀಕ್ಷಕರಿಗೆ ಒಂದು ರೀತಿಯ ಥ್ರಿಲ್ ನೀಡಲು ಮಾಡುತ್ತಿರುವ ನಾಟಕ ಎಂಬುದು ಸ್ಪಷ್ಟ ಆಗುತ್ತದೆ.
Comments are closed.