ಮನೋರಂಜನೆ

ಬಿಗ್‌ಬಾಸ್‌ ಮನೆಮಂದಿಯಲ್ಲಿ ಸಂಚಲನ ಮೂಡಿಸಿದ ಕಿಚ್ಚ ಸುದೀಪ್ ! ಸುದೀಪ್ ಎದುರಿದ್ದರೂ ಗುರುತಿಸಲಾಗದ ಸ್ಪರ್ಧಿಗಳು…

Pinterest LinkedIn Tumblr

ಬೆಂಗಳೂರು: ರವಿವಾರ ಬಿಗ್‌ಬಾಸ್‌ಮನೆಮಂದಿಗೆಲ್ಲ ಕಿಚ್ಚ ಸುದೀಪ್ ಆಶ್ಚರ್ಯ ಮೂಡುವಂಥ ಸನ್ನಿವೇಶವನ್ನು ಸೃಷ್ಟಿಸಿ ಸಂಚಲನ ಮೂಡಿಸಿದರು.

ಕಿಚ್ಚ ಸುದೀಪ್ ಬಿಗ್‌ಬಾಸ್‌ಮನೆಯಲ್ಲಿ ಸ್ಪರ್ಧಿಗಳ ಮುಂದೆಯೇ ಇದ್ದರೂ, ಅವರನ್ನು ಗುರುತಿಸಲಾಗದ ಸದಸ್ಯರು, ಕೊನೆಗೆ ಆಶ್ಚರ್ಯಕ್ಕೀಡಾದರು.

ಈ ವಾರ ‘ಕಿಚ್ಚನ ಕಿಚನ್‌’ ಬಿಗ್‌ಬಾಸ್‌ಮನೆಯ ಗಾರ್ಡನ್‌ಏರಿಯಾಗೆ ಶಿಫ್ಟ್‌ಆಗಿತ್ತು. ಬಿಗ್‌ಬಾಸ್‌ಸ್ಪರ್ಧಿಗಳಿಗೆ ಬಿಗ್‌ಸರ್‌ಪ್ರೈಸ್‌ನೀಡುವ ಉದ್ದೇಶದಿಂದ ಕಿಚ್ಚ ಸುದೀಪ್‌ಬಿಗ್‌ಬಾಸ್‌ಮನೆಗೆ ಎಂಟ್ರಿಕೊಟ್ಟಿದ್ದರು.

‘ಬಹುಮಾನ ತಯಾರಿದೆ’ ಎನ್ನುವ ಟಾಸ್ಕ್‌ನಲ್ಲಿ ಮನೆಯ ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಿಯಾಜ್‌ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮ ತುಂಬಾ ಮಜವಾಗಿತ್ತು. ಚಂದನ್, ದಿವಾಕರ್‌, ಸಮೀರ್, ನಿವೇದಿತಾ, ಜೆಕೆ, ಶೃತಿ ಹಾಗೂ ಅನುಪಮಾ ಅವರು ಅದ್ಭುತವಾದ ಪ್ರದರ್ಶನ ನೀಡಿದರು.

ಇತ್ತ ಮನರಂಜನೆ ಕಾರ್ಯಕ್ರಮ ಭರದಿಂದ ಸಾಗುತ್ತಿತ್ತು. ಅತ್ತ ಸುದೀಪ್‌ಹಾಗೂ ಅವರ ಟೀಂ ಅಡುಗೆ ಕಾರ್ಯದಲ್ಲಿ ಬಿಜಿಯಾಗಿತ್ತು. ಮಧ್ಯೆ ಮಧ್ಯೆ ಸ್ಪರ್ಧಿಗಳಿಗೆ ರುಚಿ ರುಚಿಯಾದ ಅಡುಗೆ ಮಾಡಿ, ತಾವೇ ಸರ್ವ್‌ಮಾಡುತ್ತಿದ್ದರು ಸುದೀಪ್‌. ತಮಗೆ ಬೇಕಾದ ಐಟಮ್‌ಗಳನ್ನು ಕೇಳಿ ಕೇಳಿ ಪಡೆಯುತ್ತಿದ್ದರು ಸ್ಪರ್ಧಿಗಳು. ಆದರೆ, ತಮಗೆ ಅಡುಗೆ ಮಾಡಿ ಬಡಿಸುತ್ತಿದ್ದವರು ಸುದೀಪ್‌ಅವರೇ ಎಂಬುದು ಅಲ್ಲಿಯ ಯಾವ ಸ್ಪರ್ಧಿಗಳಿಗೂ ಗೊತ್ತಿರಲಿಲ್ಲ.

ಇನ್ನು ಎಲ್ಲ ಸ್ಪರ್ಧಿಗಳು ಕಿಚ್ಚನ ಎದುರೇ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು. ಈ ವೇಳೆ ಸುದೀಪ್ ಅಲ್ಲಿರುವುದು ಯಾರಿಗೂ ಗೊತ್ತಿರಲಿಲ್ಲ. ಕಾರಣ, ಸುದೀಪ್ ಹಾಗೂ ಅವರ ತಂಡ ಮುಖಕ್ಕೆ ಮಾಸ್ಕ್‌ಹಾಕಿಕೊಂಡಿತ್ತು. ಜತೆಗೆ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿದ್ದರು. ಹಾಗೂ ಯಾರೂ ಕೂಡ ಮಾತನಾಡದೇ ಮೌನವಾಗಿಯೇ ಅಡುಗೆ ಕೆಲಸ ಮಾಡುತ್ತಿದ್ದರು. ಬಿಗ್‌ಬಾಸ್‌ಸ್ಪರ್ಧಿಗಳು ಏನೇ ಪ್ರಶ್ನೆ ಮಾಡಿದ್ರು ಸುದೀಪ್ ಅವರು ಮಾತನಾಡುತ್ತಿರಲಿಲ್ಲ. ಈ ಹಿನ್ನೆಲೆ ಅಲ್ಲಿ ಸುದೀಪ್ ಅವರು ಇದ್ದಾರೆ ಎನ್ನುವ ಪರಿಕಲ್ಪನೆ ಸ್ಪರ್ಧಿಗಳಲ್ಲಿರಲಿಲ್ಲ.

ಸ್ಪರ್ಧಿಗಳಿಗೆ ಅಡುಗೆ ಮಾಡಿ ಉಣಬಡಿಸಿ ಬಿಗ್ ಮನೆಯ ಮುಖ್ಯದ್ವಾರದ ಮೂಲಕ ಹೊರ ನಡೆದರು. ನೇರವಾಗಿ ಬಿಗ್‌ಬಾಸ್‌ವೇದಿಕೆಗೆ ಆಗಮಿಸಿದ ಸುದೀಪ್‌, ಮನೆಯ ಸದಸ್ಯರಿಗೆ ಸರ್‌ಪ್ರೈಸ್‌ನೀಡುವುದಕ್ಕೆ ರೆಡಿಯಾದ್ರು. ವೇದಿಕೆಯ ಮೇಲೆ ತಮ್ಮ ಮುಖದ ಮಾಸ್ಕ್‌ನ್ನು ತೆಗೆದ್ರು. ಸುದೀಪ್‌ಮುಖವನ್ನು ನೋಡುತ್ತಲೇ ದಂಗಾದ್ರು ಸ್ಪರ್ಧಿಗಳು. ಅವರ ಖುಷಿ ಮುಗಿಲು ಮುಟ್ಟಿತ್ತು. ಜತೆಗೆ ನಮ್ಮ ಕಡೆಯಿಂದ ಸುದೀಪ್ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಅಲ್ವಾ ಎಂದು ಮರುಕ ಪಟ್ಟರು.

Comments are closed.