
ಬೆಂಗಳೂರು: ಬಿಗ್ಬಾಸ್ಮನೆಯಿಂದ ಹೊರಬಂದಿರುವ ಕೃಷಿ ಪ್ರಕಾರ ಈ ಇಬ್ಬರು ಸ್ಪರ್ಧಿಗಳು ಮನೆಯಲ್ಲಿ ಇರಲು ಅನರ್ಹರಂತೆ !
ಬಿಗ್ಬಾಸ್ಮನೆಯಲ್ಲಿರುವಾಗ ಕೃಷಿ ವಿರುದ್ಧ ಹಲವು ಸದಸ್ಯರು ನಾನಾ ರೀತಿಯ ಆರೋಪವನ್ನು ಮಾಡಿದ್ದು, ಈ ವೇಳೆ ಕಣ್ಣೀರು ಕೂಡ ಸುರಿಸಿದ್ದರು. ಈಗ ಮನೆಯಿಂದ ಹೊರಬಿದ್ದಿರುವ ಕೃಷಿ ಮನೆಯಲ್ಲಿರುವವರ ಬಗ್ಗೆ ಕೆಂಡ ಕಾರಿದ್ದಾರೆ.
ಬಿಗ್ಬಾಸ್ಮನೆಯಿಂದ 12 ನೇ ವಾರಕ್ಕೆ ಹೊರಕ್ಕೆ ಬಂದಿರುವ ಸ್ಪರ್ಧಿ ಕೃಷಿಯವರು ರವಿವಾರ ನಡೆದ ಸೂಪರ್ ಸಂಡೇ ವಿತ್ಸುದೀಪ್ ಎಪಿಸೋಡಿನಲ್ಲಿ ಮನೆ ಮಂದಿ ವಿರುದ್ಧ ಆರೋಪ ಮಾಡಿದರು.
ಬಿಗ್ಬಾಸ್ವೇದಿಕೆಗೆ ಆಗಮಿಸಿದ ಕೃಷಿ, ತಾವು ಇಷ್ಟು ಬೇಗನೆ ಮನೆಯಿಂದ ಹೊರ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ತಾವು ಎಲಿಮಿನೇಟ್ಆಗಿರುವುದಕ್ಕೆ ಕಾರಣವೇನು ಎಂದು ಸುದೀಪ್ ಅವರನ್ನು ಕೇಳಿಕೊಂಡ್ರು. ಇದೇ ವೇಳೆ ತಮಗಿಂತ ಟ್ಯಾಲೆಂಟ್ಕಡಿಮೆ ಇರೋರು ಬಿಗ್ಬಾಸ್ಮನೆಯಲ್ಲಿದ್ದಾರೆ ಎಂದು ಹೇಳಿದರು.
ಮಾತು ಮುಂದುವರೆಸಿದ ಕೃಷಿ, ಸಮೀರ್ ಆಚಾರ್ಯ ಹಾಗೂ ನಿವೇದಿತಾ ಗೌಡ ಅವರಿಗೆ ಬಿಗ್ಬಾಸ್ಮನೆಯಲ್ಲಿರಲು ಅರ್ಹತೆಯಿಲ್ಲ. ನನ್ನ ಬದಲಿಗೆ ಅವರೇ ಹೊರಬರಬೇಕಿತ್ತು. ಸಮೀರ್ ಆಚಾರ್ಯ ಅವರು ಬಿಗ್ಬಾಸ್ಮನೆಯಲ್ಲಿ ಬೇಜವಾಬ್ದಾರಿಯಿಂದ ಇರುತ್ತಾರೆ. ಪ್ರಾರಂಭದಲ್ಲಿ ಅವರಿಗೆ ತುಂಬಾ ಗೌರವ ನೀಡಿದ್ದೆವು. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ತುಂಬಾ ಸುಳ್ಳು ಹೇಳ್ತಾರೆ. ನಿವೇದಿತಾ ಕೂಡ ಮನೆಯಲ್ಲಿ ಇರಲು ಅನರ್ಹಳು ಎಂದು ಹೇಳಿದ ಕೃಷಿ, ರಿಯಾಜ್ ಹೆಸರನ್ನು ತೆಗೆದುಕೊಂಡು, ಇವರು ತುಂಬಾ ನೆಗೆಟಿವ್ಇದ್ದಾರೆ ಎಂದರು.
Comments are closed.