ಮನೋರಂಜನೆ

ಜೂ.ಕಿಚ್ಚನ ನಿರೀಕ್ಷೆಯಲ್ಲಿದ್ದಾರಾ ಕಿಚ್ಚ ಸುದೀಪ್!

Pinterest LinkedIn Tumblr


ನಟ ಕಿಚ್ಚ ಸುದೀಪ್‍ ಅವರಿಗೆ ಈಗಾಗಲೆ ಸಾನ್ವಿ ಹೆಸರಿನ ಹೆಣ್ಣುಮಗು ಇದೆ. ಸಾನ್ವಿಗೆ ಈಗ 11 ವರ್ಷ ವಯಸ್ಸು. ಕಿಚ್ಚ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಅದೂ ಗಂಡುಮಗು ಏನಾದಾರೂ ಬಯಸಿದ್ದಾರೋ ಏನೋ ಗೊತ್ತಿಲ್ಲ. ಆದರೆ ನವರಸ ನಾಯಕ ಜಗ್ಗೇಶ್ ಮಾತ್ರ ಈ ಬಗ್ಗೆ ಟ್ವೀಟ್ ಮಾಡಿ, ‘Lovely pic.ಗಂಡು ಮಗು ಪ್ರಾಪ್ತಿರಸ್ತು:) ಕರುನಾಡು ಕಾಯುತ್ತಿದೆ ಜೂ.ಕಿಚ್ಚನಿಗೆ..’ ಎಂದು ಹರಸಿದ್ದಾರೆ.

ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಪತ್ನಿ ಜತೆಗಿರುವ ಸುದೀಪ್‌ರ ರೊಮ್ಯಾಂಟಿಕ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋಗೆ ಪ್ರತಿಕ್ರಿಯಿಸುತ್ತಾ ಗಂಡು ಮಗು ಪ್ರಾಪ್ತಿರಸ್ತು ಎಂದಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದು, ಹೆಣ್ಣು ಗಂಡು ಎಂಬ ಬೇಧ ಯಾಕೆ ಮಾಡುತ್ತಿದ್ದೀರಾ ಎಂದೂ ಜಗ್ಗೇಶ್‌ರನ್ನು ಕೇಳಿದ್ದಾರೆ.

ಇದಕ್ಕೂ ಉತ್ತರಿಸಿರುವ ಜಗ್ಗೇಶ್, ಹೆಣ್ಣು ಮಗು ಎಂದರೆ ಎಲ್ಲರಿಗಿಂತ ಹೆಚ್ಚು ಗೌರವಿಸುವವನು ನಾನೇ. ಈಗಾಗಲೆ ಅವರಿಗೆ ಹೆಣ್ಣು ಮಗು ಇದೆ. ಹಾಗಾಗಿ ಹೇಳಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಜಗ್ಗೇಶ್ ಹರಕೆಯಂತೆ ಕಿಚ್ಚ ಸುದೀಪ್ ಕಡೆಯಿಂದ ಗುಡ್ ನ್ಯೂಸ್ ಬರಬಹುದೇ? ಕಾದು ನೋಡಬೇಕು.

Comments are closed.