
ಬಿಗ್ಬಾಸ್ ಮನೆಯಿಂದ ಶನಿವಾರ ಹೊರಬಂದಿರುವ ದಿವಾಕರ್ ನೇರವಾಗಿ ಸೀಕ್ರೆಟ್ ರೂಮಿಗೆ ತೆರಳಿದ್ದಾರೆ.
ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜತೆ ಎಪಿಸೋಡಿನಲ್ಲಿ ಸ್ಪರ್ಧಿ ದಿವಾಕರ್ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ದಿವಾಕರ್ ಎಲಿಮಿನೇಟ್ ಬಿಗ್ ಮನೆಯ ಹಾಗೂ ಹೊರಗಡೆ ಹಲವು ಪ್ರಶ್ನೆಗಳನ್ನು ಮೂಡಿಸಿತ್ತು. ಅಷ್ಟು ಚೆನ್ನಾಗಿ ಆಟವಾಡುತ್ತಿದ್ದ ದಿವಾಕರ್ ಹೇಗೆ ಮನೆಯಿಂದ ಹೊರಹೋದ್ರು ಎನ್ನುವ ಗೊಂದಲ ಕಾಡುತ್ತಿತ್ತು. ಆದ್ರೆ ದಿವಾಕರ್ ಅವರನ್ನು ಸೀಕ್ರೆಟ್ ರೂಮ್ಗೆ ಕಳುಹಿಸಲಾಗಿದೆ.
ದಿವಾಕರ್ ಮನೆಯಿಂದ ಹೊರಹೋಗಿರುವುದಕ್ಕೆ ಚಂದನ್ ಶೆಟ್ಟಿ ಬಹಳಷ್ಟು ನೊಂದುಕೊಂಡಿದ್ದಾರೆ. ದಿವಾಕರ್ ಸೀಕ್ರೆಟ್ ರೂಮಿನಲ್ಲಿದ್ದುಕೊಂಡು ಬಿಗ್ ಬಾಸ್ ಮನೆಯ ಎಲ್ಲ ಗುಟ್ಟಗಳನ್ನು ನೋಡಲಿದ್ದಾರೆ. ಯಾರು ಏನು ಎಂಬ ಅರಿವು ದಿವಾಕರ್’ಗೆ ಈಗ ಸ್ಪಷ್ಟವಾಗಲಿದೆ.
Comments are closed.