ಮನೋರಂಜನೆ

ಬಿಗ್‌ಬಾಸ್’ನಿಂದ ಹೊರಬಂದಿರುವ ಜೆಎಸ್‌ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಷಯವೇನು ಗೊತ್ತೇ…?

Pinterest LinkedIn Tumblr

ಬಿಗ್‌ಬಾಸ್ ಮನೆಯಿಂದ 11 ನೇ ವಾರಕ್ಕೆ ಹೊರಬಂದಿರುವ ಸ್ಪರ್ಧಿ ಜಯ ಶ್ರೀನಿವಾಸ್‌ ಅವರು ಭಾನುವಾರ ನಡೆದ ‘ಸೂಪರ್ ಸಂಡೇ ವಿಥ್‌ ಸುದೀಪ’ ಎಪಿಸೋಡಿನಲ್ಲಿ ಹಾಜರಾಗಿದ್ದರು.

ಬಿಗ್‌ಬಾಸ್ ವೇದಿಕೆಗೆ ಜೆಎಸ್ ಅವರನ್ನು ಬರಮಾಡಿಕೊಂಡ ಸುದೀಪ, ಬಿಗ್‌ಬಾಸ್ ಮನೆಯ ಅವರ ಜರ್ನಿ ಕುರಿತ ಎರಡು ವಿಡಿಯೋ ತುಣುಕುಗಳನ್ನು ತೋರಿಸಿದ್ರು. ಬಳಿಕ ಬಿಗ್‌ ಮನೆಯಿಂದ ಔಟ್‌ ಆಗಲು ಕಾರಣವಾದ ಅಂಶಗಳ ಕುರಿತು ವಿಶ್ಲೇಷಣೆ ನಡೆಸಿದ್ರು.

ಸುದೀಪ ಜೊತೆ ಮಾತು ಮುಂದುವರೆಸಿದ ಶ್ರೀನಿವಾಸನ್‌, ಸದ್ಯ ಬಿಗ್ ಮನೆಯಲ್ಲಿರುವ ಸ್ಪರ್ಧಿಗಳ ನಡುವಿನ ಸಂಬಂಧದ ಕುರಿತು ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಬಹಿರಂಗ ಪಡಿಸಿದ್ರು. ಈ ಸೀಸನ್‌ನ ಆರಂಭದಲ್ಲಿ ಸಾಮಾನ್ಯ ಹಾಗೂ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆಯಿದ್ದ ಭೇದ-ಭಾವ ಮರೆಯಾಗಿದೆ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಜೆಎಸ್ ಹೇಳುವಂತೆ ಇನ್ನೂ ಕೂಡ ಸಾಮಾನ್ಯ ಹಾಗೂ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಕೋಲ್ಡ್‌ ವಾರ್ ನಡೆಯುತ್ತಿದೆಯಂತೆ.

ಇನ್ನು ಇದೇ ವೇಳೆ ಬಿಗ್‌ಬಾಸ್‌ನ ಈ ಸೀಸನ್‌ ವಿನ್ನರ್‌ ಯಾರು ಎಂಬ ಬಗ್ಗೆ ಶ್ರೀನಿವಾಸನ್‌ ಅಭಿಪ್ರಾಯ ಹಂಚಿಕೊಂಡರು. ಜೆಕೆ, ಚಂದನ್‌, ಅನುಪಮಾ, ರಿಯಾಜ್ ಹಾಗೂ ಶೃತಿ ಫೈನಲ್‌‌ವರೆಗೆ ಬರಬಹುದು. ಆದರೆ, ಜೆಕೆ ಅಥವಾ ಚಂದನ್‌ ಬಿಗ್‌ಬಾಸ್ ವಿನ್ ಆಗಬಹುದು ಎಂದು ಭವಿಷ್ಯ ನುಡಿದ್ರು.

Comments are closed.