ಮನೋರಂಜನೆ

ಪುನೀತ್ ಅಭಿನಯದ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ಕೋರ್ಟ್ ತಡೆ! ವಕೀಲರೊಬ್ಬರು ಕೋರ್ಟ್’ನಲ್ಲಿ ನೀಡಿದ್ದು ಯಾಕೆ ?

Pinterest LinkedIn Tumblr

ಬೆಂಗಳೂರು: ಪವರ್ ಸ್ಟಾರ್ ಅಭಿಮಾನಿಗಳಿಗೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ, ಹೌದು ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರಪ್ರದರ್ಶನಕ್ಕೆ ಕೋರ್ಟ್ ಶನಿವಾರ ತಡೆ ನೀಡಿದ್ದು, ಜನವರಿ 2ನೇ ತಾರೀಕಿನವರೆಗೆ ಚಿತ್ರ ಪ್ರದರ್ಶಿಸುವಂತಿಲ್ಲ ಎಂದು ತಿಳಿಸಿದೆ.

ಇಂದು ಸಂಜೆ 7.30ರ ನಂತರ ಅಂಜನಿಪುತ್ರ ಸಿನಿಮಾ ಪ್ರದರ್ಶನ ಮುಂದುವರಿಸುವಂತಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ.

ತಡೆಯಾಜ್ಞೆ ಯಾಕೆ?

ಅಂಜನಿಪುತ್ರ ಚಿತ್ರದಲ್ಲಿ ನಟ ರವಿಶಂಕರ್ ಅವರು ವಕೀಲ ವೃತ್ತಿ ಬಗ್ಗೆ ಅವಹೇಳನಕಾರಿ ಸಂಭಾಷಣೆ ನಡೆಸುವ ಮೂಲಕ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ವಕೀಲ ಜಿ.ನಾರಾಯಣಸ್ವಾಮಿ ಅವರು ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು.

ಏನಿದು ಡೈಲಾಗ್?

ಅಕಾರ್ಡಿಂಗ್ ಟು ಸೆಕ್ಷನ್..1… ಏಯ್ ನಿನ್ನ ಗಂ.. ಏನ್ ಇದ್ರೂ ಕೋರ್ಟ್ ನಲ್ಲಿ ಅಲ್ಲಾಡಿಸು…ಇಲ್ಲೇನಾದ್ರೂ ಅಲ್ಲಾಡಿಸಿದ್ರೆ ನಿನ್ ಗಂ ಕ…ಎಂಬ ಡೈಲಾಗ್ ರವಿಶಂಕರ್ ಹೊಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಡೈಲಾಗ್ ಇದೀಗ ಅಂಜನಿಪುತ್ರ ಪ್ರದರ್ಶನಕ್ಕೆ ತಡೆಯೊಡ್ಡುವಂತೆ ಮಾಡಿದೆ.

ಚಿತ್ರಪ್ರದರ್ಶನಕ್ಕೆ ತೊಂದರೆ ಇಲ್ಲ: ಜಾಕ್ ಮಂಜು, ಚಿತ್ರದ ವಿತರಕ

ತಮಗಿನ್ನೂ ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ, ಆದರೆ ಚಿತ್ರ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ ಎಂಬ ಮಾಹಿತಿ ಸಿಕ್ಕಿದೆ. ಮುಂದೇನು ಮಾಡಬೇಕು ಎಂಬುದನ್ನು ನಮ್ಮ ವಕೀಲರ ಜತೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಖಾಸಗಿ ಟಿವಿ ಚಾನೆಲ್ ಜತೆ ಮಾತನಾಡುತ್ತ ವಿವರಿಸಿದ್ದಾರೆ.

Comments are closed.