ಮನೋರಂಜನೆ

ಉತ್ತಮ ಪ್ರದರ್ಶನ ಕಾಣುತ್ತಿರುವ ‘ಟೈಗರ್ ಜಿಂದಾಹೈ’ ಚಿತ್ರದ ಮೊದಲ ದಿನದ ಗಳಿಕೆ ₹33.75 ಕೋಟಿ !

Pinterest LinkedIn Tumblr

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹಾಗೂ ಕತ್ರೀನಾ ಕೈಫ್ ಅಭಿನಯದ ‘ಟೈಗರ್ ಜಿಂದಾಹೈ’ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನ ₹ 33.75 ಕೋಟಿ ಗಳಿಸಿದೆ.

ವಿಶ್ವದಾದ್ಯಂತ 5700 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಏಕ್ ಥಾ ಟೈಗರ್’ ಹಿಂದಿ ಚಿತ್ರ ತೆರೆಕಂಡು ಐದು ವರ್ಷಗಳಾಗಿವೆ. ಕಬೀರ್ ಖಾನ್ ನಿರ್ದೇಶನದ ಆ ಚಿತ್ರ ಅಷ್ಟೇನೂ ಬಿಗುವಾಗಿ ಇಲ್ಲದಿದ್ದರೂ ಕೆಲವು ರೋಮಾಂಚಕ ಸಾಹಸ ಸನ್ನಿವೇಶಗಳಿಂದಲೇ ಜನಮನ ಗೆದ್ದಿತ್ತು.

‘ಏಕ್ ಥಾ ಟೈಗರ್’ನ ಮುಂದುವರಿದ ಭಾಗವಾದ ‘ಟೈಗರ್ ಜಿಂದಾಹೈ’ ಗಟ್ಟಿ ಶಿಲ್ಪದ ಥ್ರಿಲ್ಲರ್. ಹಾಲಿವುಡ್ ಶೈಲಿಯ ತಾಂತ್ರಿಕ ಕಸುಬುದಾರಿಕೆ ಚಿತ್ರದ ಸಕಾರಾತ್ಮಕ ಅಂಶ. ಚಿತ್ರಕಥೆಯಲ್ಲಿ ಭಾರತೀಯ ಮಸಾಲೆ ಸೇರಿಸಿರುವುದು ವಾಣಿಜ್ಯಿಕ ಜಾಣತನವನ್ನು ತೋರಿದೆ.

Comments are closed.